ತನ್ನದೇ ಹಳೆಯ ದಾಖಲೆ ಮುರಿದು ಹೊಸ ದಾಖಲೆ ಬರೆದ ಕಂಬಳದ ಉಸೇನ್ ಬೋಲ್ಟ್
ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಅವರು ಕಕ್ಯಪದವು ಮೈರಾ ಸತ್ಯ ಧರ್ಮ ಜೋಡುಕರೆ ಬಯಲು ಕಂಬಳದಲ್ಲಿ ತನ್ನದೇ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಬಂಟ್ವಾಳದ ಕಕ್ಯಪದವುನಲ್ಲಿ ಭಾನುವಾರ ನಡೆದ ಕಂಬಳದಲ್ಲಿ 8.78 ಸೆಕೆಂಡ್ ನಲ್ಲಿ 100 ಮೀಟರ್ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಕಳೆದ ವಾರ ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಅವರು 100 ಮೀಟರ್ ದೂರವನ್ನು 8.89 ಸೆಕೆಂಡ್ ಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದರು. ಭಾನುವಾರ ಮೈರಾದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಶ್ರೀನಿವಾಸ ಗೌಡ ಅವರು ಮಿಜಾರು ಪ್ರಸಾದ್ ನಿಲಯ ಶಕ್ತಿಪ್ರಸಾದ್ ಶೆಟ್ಟಿ ಅವರ ಕೋಣಗಳನ್ನು ಓಡಿಸಿ 100 ಮೀಟರ್ ದೂರವನ್ನು 8.78 ಸೆಕೆಂಡ್ ನಲ್ಲಿ ಕ್ರಮಿಸಿ ದಾಖಲೆ ಬರೆದಿದ್ದಾರೆ.
ಕಕ್ಯಪದವು ಮೈರಾ ಸತ್ಯ – ಧರ್ಮ ಜೋಡುಕರೆ ಬಯಲು ಕಂಬಳದಲ್ಲಿ ತಮ್ಮ ಹಳೆಯ ದಾಖಲೆಯನ್ನು ಹಿಂದಿಕ್ಕಿ ಹೊಸ ದಾಖಲೆ ಸೃಷ್ಟಿಸಿರುವ ಅವರು ಈ ಬಾರಿಯ ಕಂಬಳದ ಸೀಸಸ್ ನಲ್ಲಿ 18 ಪದಕಗಳನ್ನು ಗಳಿಸಿದ್ದಾರೆ.
ಗೋಡಂಬಿ ಹಾಲಿನ ಆರೋಗ್ಯ ಪ್ರಯೋಜನಗಳು ಮತ್ತು ತಯಾರಿಸುವ ವಿಧಾನ#healthtips #cashew #health #milk https://t.co/ScQrX4nnSF
— Saaksha TV (@SaakshaTv) March 22, 2021
ಹೈದರಾಬಾದಿ ಮಟನ್ ದಮ್ ಬಿರಿಯಾನಿ#recipes #muttonbiryani #food https://t.co/rdecTf9drv
— Saaksha TV (@SaakshaTv) March 22, 2021
ಎಲ್ಟಿಸಿ ನಗದು ಚೀಟಿ ಯೋಜನೆಯನ್ನು ಹೇಗೆ ಪಡೆಯುವುದು ? ಇಲ್ಲಿದೆ ಮಾಹಿತಿ https://t.co/QYkGNiqfNC
— Saaksha TV (@SaakshaTv) March 22, 2021
ಆಲಿಯಾ ಯಾವತ್ತೂ ಮದುವೆಯಾಗಬಾರದು ಎಂದು ಬೆದರಿಕೆ ಹಾಕಿದ ಮಹೇಶ್ ಭಟ್ https://t.co/N0tImKAtRF
— Saaksha TV (@SaakshaTv) March 21, 2021
#MijaruSrinivasGowda #Kambalarecord