Liger : ಹೀರೋ ಗಿಂತ ಮೈಕ್ ಟೈಸನ್ ಗೆ ಹೆಚ್ಚು ಸಂಭಾವನೆ
ಲೈಗರ್ ಸಿನಿಮಾ ಮೂಲಕ ಇಂಟರ್ ನ್ಯಾಷನಲ್ ಸ್ಟಾರ್ ಮೈಕ್ ಟೈಸನ್ ಭಾರತೀಯ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.
ಟಾಲಿವುಡ್ ನ ರೌಡಿ ಹೀರೋ ವಿಜಯ್ ದೇವರಕೊಂಡ – ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ತೆರೆಕಂಡ ಲೈಗರ್ ಸಿನಿಮಾದಲ್ಲಿಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹೀಗಾಗಿಯೇ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದ್ರೆ ಥಿಯೇಟರ್ ಅಂಗಳದಲ್ಲಿ ಈ ಸಿನಿಮಾ ಮಕಾಡೆ ಮಲಗಿಬಿಟ್ಟಿದೆ.
ಪ್ರೇಕ್ಷಕರು ಲೈಗರ್ ಸಿನಿಮಾಗೆ ಮೈನಸ್ ಮಾರ್ಕ್ಸ್ ಕೊಡುತ್ತಿದ್ದರೇ ಚಿತ್ರತಂಡ ಮಾತ್ರ ಬ್ಲಾಕ್ ಬಸ್ಟರ್ ಅಂತಾ ಪ್ರೋಮೋ ಬಿಡುಗಡೆ ಮಾಡುತ್ತಿದ್ದಾರೆ.
ಈ ನಡುವೆ ಮ್ಯೂವಿ ಬಜೆಟ್, ಹೀರೋ, ಹೀರೋಯಿನ್ ರೆಮ್ಯೂನರೇಷನ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಲೈಗರ್ ನಲ್ಲಿ ಪ್ರಧಾನ ಪಾತ್ರಗಳನ್ನು ಪೋಷಿಸಿದ ಸಿನಿಯರ್ ನಟಿ ರಮ್ಯಾಕೃಷ್ಣ, ಮೈಕ್ ಟೈಸನ್ ಅವರ ಸಂಭಾವನೆ ಬಗ್ಗೆ ಗುಸು ಗುಸು ಚರ್ಚೆ ನಡೆಯುತ್ತಿದೆ.
ಈ ಸಿನಿಮಾಗಾಗಿ ವಿಜಯ್ ದೇವರಕೊಂಡ 35 ಕೋಟಿ ರುಪಾಯಿಗಳನ್ನು ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.
ಇನ್ನು ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ತಾಯಿಯಾಗಿ ನಟಿಸಿದ ರಮ್ಯಾಕೃಷ್ಣ ಅವರು ಒಂದು ಕೋಟಿ ರುಪಾಯಿ ಸಂಭಾವನೆ ಪಡೆದುಕೊಂಡಿದ್ದಾರಂತೆ.
ಕೋಚ್ ಆಗಿ ಕಾಣಿಸಿಕೊಂಡ ರೌನಿತ್ ರಾಯ್ 1.5 ಕೋಟಿ, ಅನನ್ಯ ಪಾಂಡೆ ಮೂರು ಕೋಟಿ, ಮೈಕ್ ಟೈಸನ್ 40 ಕೋಟಿ ರುಪಾಯಿಗಳನ್ನು ಸಂಭಾವನೆಯಾಗಿ ಪಡೆದುಕೊಂಡಿದ್ದಾರೆ ಎಂದು ಟಾಲಿವುಡ್ ಮೂಲಗಳು ತಿಳಿಸಿವೆ.
ಅಂದರೆ ಮೈಕ್ ಟೈಸನ್ ಈ ಸಿನಿಮಾದಲ್ಲಿ ನಟಿಸಲು ವಿಜಯ್ ದೇವರಕೊಂಡ ಅವರಿಗಿಂತ ಹೆಚ್ಚು ಹಣ ಪಡೆದುಕೊಂಡಿದ್ದಾರೆ.








