ರೈತರಿಂದ ಹಾಲು ಖರೀದಿ ಸ್ಥಗಿತ ಮಾಡಲು ಕೆಎಂಎಫ್ ಚಿಂತನೆ..!
ರೈತರಿಂದ ಹಾಲು ಖರೀದಿ ಸ್ಥಗಿತ ಮಾಡಲು ಕೆಎಂಎಫ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಲಾಕ್ ಡೌನ್ ನಿಂದಾಗಿ ನಂದಿನಿ ಹಾಲು ಮಾರಾಟ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. ಆದ್ರೆ ಹಾಲಿನ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಇದೆ.. ದಿನಕ್ಕೆ 88 ಲಕ್ಷ ಲೀಟರ್ ಹಾಲು ರೈತರಿಂದ ಸಂಗ್ರಹವಾಗ್ತಿದೆ. ಹೀಗಾಗಿ ವಾರಕ್ಕೆ 2 ದಿನ ಹಾಲು ಖರೀದಿ ಸ್ಥಗಿತ ಮಾಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ನಿತ್ಯ 35 ಲಕ್ಷ ಲೀಟರ್ ಹಾಲು ಹೆಚ್ಚುವರಿ ಯಾಗಿ ಸಂಗ್ರಹವಾಗ್ತಿದೆ. ಹಾಲಿನ ಪುಡಿಯಾಗಿ KMF ಪರಿವರ್ತಿ ಸುತ್ತಿದೆ. ಆದ್ರೆ ಪರಿವರ್ತನಗೆ ಇರುವ ಸಾಮರ್ಥ್ಯ ಮೀತಿ ಮೀರಿದೆ ಎನ್ನಲಾಗ್ತಿದ್ದು, ರೈತರಿಂದ ವಾರದಲ್ಲಿ ಎರಡು ದಿನ ಹಾಲು ಖರೀದಿ ಮಾಡದಿರಲು ಚಿಂತನೆ ನಡೆಸಿರುವುದಾಗಿ ತಿಳಿದುಬಂದಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.