ಮಿಲ್ಖಾ ಸಿಂಗ್ ಗೆ ಕೊರೊನಾ : ಮೊಹಾಲಿಯ ಫೋರ್ಟಿಸ್ ಗೆ ದಾಖಲು
ಚಂಡೀಘರ್ : ಖ್ಯಾತ ಸ್ಪ್ರಿಂಟರ್ ಮಿಲ್ಕಾ ಸಿಂಗ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರಿಗೆ ಕಳೆದ ಐದು ದಿನಗಳ ಹಿಂದೆ ಸೋಂಕು ದೃಢಪಟ್ಟಿತ್ತು. ಅವರು ತಮ್ಮ ನಿವಾಸದಲ್ಲೇ ಹೋಂ ಐಸೋಲೇಷನ್ ಆಗಿದ್ದರು.
ಆದ್ರೆ ಇದೀಗ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಕುರಿತು ಅವರ ಮಗ ಮತ್ತು ಪ್ರಸಿದ್ದ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಈ ಬಗ್ಗೆ ಖಚಿತಪಡಿಸಿದ್ದಾರೆ.
“ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರು ಬಹಳ ನಿರ್ಬಲವಾಗಿದ್ದು, ನಿನ್ನೆಯಿಂದ ಊಟ ಮಾಡುತ್ತಿರಲಿಲ್ಲ, ಆದ್ದರಿಂದ ನಾವು ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಗಿತ್ತು.
ಅವರ ಸ್ಥಿತಿ ಸ್ಥಿರವಾಗಿದೆ. ಆದರೂ ಅವರು ಹಿರಿಯ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಜೀವ್ ತಿಳಿಸಿದ್ದಾರೆ.