ಕೊರೊನಾ ಎರಡನೇ ಅಲೆಗೆ ಲಕ್ಷಾಂತರ ಮಂದಿ ಸಾವನ್ನಪ್ಪುವ ಸಂಭವ – ವಿಶ್ವ ಆರೋಗ್ಯ ಸಂಸ್ಥೆ
ಜಿನೀವಾ, ಜೂನ್ 28: ಕೊರೊನಾ ಸಾಂಕ್ರಾಮಿಕ ಸೋಂಕಿನ ಮೊದಲನೇ ಅಲೆಯ ಮರಣನರ್ತನಕ್ಕೆ ಜನರು ತತ್ತರಿಸಿ ಹೋಗಿರುವಾಗ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸೋಂಕಿನ ಎರಡನೇ ಅಲೆಗೆ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಅಸಿಸ್ಟೆಂಟ್ ಡೈರಕ್ಟರ್ ಜನರಲ್ ರನೀರಿ ಗುಯೆರಾ ಈ ಕುರಿತು ಇಟಲಿಯ ಮಾಧ್ಯಮದ ಜೊತೆ ಮಾತನಾಡಿದ್ದು, 100 ವರ್ಷಗಳ ಹಿಂದೆ ಲಕ್ಷಾಂತರ ಮಂದಿ ಸ್ಪಾನಿಷ್ ಪ್ಲೂನ ಎರಡನೇ ಅಲೆಯಿಂದ ಸಾವನ್ನಪ್ಪಿದ ರೀತಿಯಲ್ಲಿ ಕೊರೊನಾ ಕೂಡ ಕಾಣಿಸಿಕೊಂಡಿದೆ.
100 ವರ್ಷದ ಹಿಂದೆ ಕಾಣಿಸಿಕೊಂಡಿದ್ದ ಸ್ಪಾನಿಷ್ ಪ್ಲೂನ ಪ್ರಭಾವ ಬೇಸಿಗೆ ಕಾಲದಲ್ಲಿ ಕಡಿಮೆಯಾದಂತೆ ಕಾಣಿಸಿದರೂ ಬಳಿಕ ಅದರ ಪ್ರಭಾವ ಹೆಚ್ಚಾಗಿತ್ತು. ಅಷ್ಟೇ ಅಲ್ಲ ಲಕ್ಷಾಂತರ ಮಂದಿಯ ಸಾವಿಗೆ ಕೂಡ ಕಾರಣವಾಗಿತ್ತು. ಇದೀಗ ಜಗತ್ತಿನಾದ್ಯಂತ ವ್ಯಾಪಕವಾಗಿರುವ ಕೊರೊನಾದ ಎರಡನೇ ಅಲೆಯು ಕೂಡ ಅಪಾಯ ತಂದಿಡುವ ಸಾಧ್ಯತೆ ಇದ್ದು, ಸೆಪ್ಟೆಂಬರ್ ನಲ್ಲಿ ಪುನಃ ಕೊರೊನಾ ಸಾಂಕ್ರಾಮಿಕ ಕಾಣಿಸಿಕೊಂಡರೆ, ಎಲ್ಲೆಡೆಯೂ ಅದು ವ್ಯಾಪಕವಾಗಿ ಹರಡುವ ಭೀತಿ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.