ವಿಜಯಪುರ: ಮೊಬೈಲ್ ಗಳಲ್ಲಿ ಕ್ಲೌಡ್ ಮಾರಾಟ ಮಾಡುವ ಕಂಪನಿ ಹೆಸರಿನಲ್ಲಿ ಅಧಿಕಾರಿಯೊಬ್ಬಾತ ಲಕ್ಷ ಲಕ್ಷ ವಂಚಿಸಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ರವೀಂದ್ರ ಬೆಳ್ಳಿ ಎಂದು ಗುರುತಿಸಲಾಗಿದ್ದು, ನಗರದ ಹೊರವಲಯದಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಸ್ತೀರ್ಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ದಿ ಬ್ಯಾಂಕ್ ಎಂಬ ಕಂಪನಿ ಹೆಸರಿನಲ್ಲಿ ಹಣ ಹೂಡಿಕೆ ಮಾಡುವುದಾಗಿ ಬಸವರಾಜ ಜಿರಾಳೆ ಎಂಬ ವ್ಯಕ್ತಿಗೆ 40 ಲಕ್ಷ ರೂ. ಹಣ ವಂಚಿಸಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಧಿಕಾರಿ ಸೇರಿದಂತೆ 7 ಜನರ ವಿರುದ್ಧ ದೂರು ದಾಖಲಾಗಿದೆ. ದಿ ಬ್ಯಾಂಕ್ ಎಂಬ ಕಂಪನಿ ಮೊಬೈಲ್ ಸ್ಟೋರೇಜ್‌ಗಾಗಿ ಕ್ಲೌಡ್ ಸೇಲ್ಸ್ ಮಾಡುತ್ತದೆ. ಇದೊಂದು ಚೈನ್ ಸಿಸ್ಟಮ್ ವ್ಯಾಪಾರವಾಗಿದ್ದು, ದೂರುದಾರರಿಂದ 40 ಲಕ್ಷ ರೂ.ಗಳನ್ನು ಹೂಡಿಕೆಗಾಗಿ ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈಗಾಗಲೇ ರವೀಂದ್ರ ಅವರ ಮೇಲೆ ಎಫ್‌ಐಆರ್ ದಾಖಲಾಗಿ ಎರಡು ತಿಂಗಳುಗಳು ಕಳೆದಿದೆ. ಆದರೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ಎಫ್‌ಐಆರ್ ದಾಖಲಾದರೂ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಯಾವುದೆ ಕ್ರಮ ತೆಗೆದುಕೊಂಡಿಲ್ಲ ಎಂದು ದೂರುದಾರ ಆರೋಪಿಸಿದ್ದಾರೆ.







