ಪಂಚಾಯ್ತಿ ಸದಸ್ಯೆ ಕುಳಿತಿದ್ದ ಬೈಕ್ಗೆ ಮಿನಿ ಪ್ಯಾಸೆಂಜರ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಗ್ರಾಮಪಂಚಾಯ್ತಿ ಮಹಿಳಾ ಸದಸ್ಯೆ ಗಂಭೀರಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕೋಟೆಕೆರೆಯಲ್ಲಿ ನಡೆದಿದೆ.
ಮೀನಾಡಿಯಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮೀನಾಡಿ ನಿವಾಸಿ, ಕುಟ್ರುಪ್ಪಾಡಿ ಪಂಚಾಯತ್ ಸದಸ್ಯೆ ಕುಸುಮಾ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಹೀಗೆ ಗಾಯಗೊಂಡ ಕುಸುಮಾ ರನ್ನು ಸ್ಥಳೀಯ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಮಂಗಳೂರಿಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳದಿಂದ ಪರಾರಿಯಾಗಿದ್ದ ಮಿನಿಬಸ್ಸ್ ಅನ್ನು ಮರ್ಧಾಳದಲ್ಲಿ ತಡೆಹಿಡಿದು, ಕಡಬ ಪೆÇಲೀಸರಿಗೆ ಒಪ್ಪಿಸಲಾಗಿದೆ.








