ಕೊರೊನಾ ಲಸಿಕೆ ಪಡೆದ ಸಚಿವ ಬಿ.ಸಿ.ಪಾಟೀಲ್
ಹಾವೇರಿ : ದೇಶದಲ್ಲಿ ಸೋಮವಾರದಿಂದ ಮೂರನೇ ಹಂತದ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದ್ದು, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ತಮ್ಮ ಸ್ವಗೃಹದಲ್ಲಿ ಸರ್ಕಾರಿ ವೈದ್ಯರಿಂದ ಕೊರೊನಾ ಲಸಿಕೆಯನ್ನ ಪಡೆದರು.
ಈ ವೇಳೆ ಮಾತನಾಡಿದ ಅವರು, ಕೊರೊನಾ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಕೆಲವರು ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಬಗ್ಗೆ ಯಾರೂ ಗಮನ ನೀಡಬಾರದು. ಸರ್ಕಾರ ಜನರ ಸುರಕ್ಷತೆಗಾಗಿ ಕೊರೋನ ಲಸಿಕೆ ನೀಡುತ್ತಿದೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಸಿಕೆಯನ್ನು ಸರ್ಕಾರಿ ವೈದ್ಯರಿಂದ ಪಡೆದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.
ಇನ್ನು ನಮ್ಮ ಭಾರತದಲ್ಲಿಯೇ ತಯಾರಿಸಿದ ಕೊರೊನಾ ಲಸಿಕೆಗೆ ಪ್ರಶಂಸೆ ವ್ಯಕ್ತವಾಗಿದೆ. ಕೊರೊನಾ ಸಂಘರ್ಷದ ಸಮಯದಲ್ಲಿ ಕರ್ನಾಟಕ ಹಾಗೂ ಭಾರತ ಸರ್ಕಾರ ಜನರೊಂದಿಗೆ ನಿಂತು ಅವರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿದೆ. ವೈದ್ಯರು ಲಸಿಕೆ ನೀಡಿದ ಬಳಿಕ ಹೇಳಿದ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ ಸಾಕು ಎಂದು ತಿಳಿಸಿದ ಬಿ.ಸಿ.ಪಾಟೀಲ್, ನಿರ್ಭೀತಿಯಿಂದ ಕೊರೊನಾ ಲಸಿಕೆ ಪಡೆಯಬೇಕೆಂದು ಮನವಿ ಮಾಡಿಕೊಂಡರು.










