ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಈಗ ಕಾಂಗ್ರೆಸ್ ನಲ್ಲಿ ದೊಡ್ಡ ಫೈಟ್ ಶುರುವಾಗಿದೆ. ಸಚಿವ ಜಾರಕಿಹೊಳಿ ತಲೆಎಣಿಕೆ ಅಸ್ತ್ರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ.
ಯಾರು ಏನೇ ಇದ್ದರೂ ಹೈಕಮಾಂಡ್‌ಗೆ ಭೇಟಿಯಾಗಿ ಹೇಳಲಿ. ಈಗಾಗಲೇ ಹೈಕಮಾಂಡ್ ನಾಯಕರು ಎಲ್ಲರಿಗೂ ಹೇಳಿದ್ದಾರೆ. ನಮ್ಮದು ಕಾರ್ಯಕರ್ತರು, ಮತದಾರರ ಪಕ್ಷ. ಯಾರು ಇರಲಿ, ಇಲ್ಲದೇ ಇರಲಿ ಪಕ್ಷ ಉಳಿಯುತ್ತದೆ. ಸ್ವಾತಂತ್ರ್ಯ ಕೊಡಿಸಿದ ಗಾಂಧಿಜೀ ಅಧಿಕಾರ ಪಡೆದ್ರಾ? ಅಂಬೇಡ್ಕರ್ ಅವರು ಅಧಿಕಾರವನ್ನು ನಮಗೆ ಬಿಟ್ಟು ಹೋದರು. ನಾಳೆ ಸುರ್ಜೇವಾಲ ಬೆಳಗಾವಿಗೆ ಬರುತ್ತಿದ್ದಾರೆ. ಎಲ್ಲರೂ ಅಲ್ಲಿಗೆ ಹೋಗಿ ಮಾತನಾಡಲಿ ಎಂದಿದ್ದಾರೆ.
ಅಹಿಂದ ನಾಯಕರು ಖರ್ಗೆ ಅವರನ್ನೇ ಪ್ರಶ್ನೆ ಮಾಡ್ತಾರಾ? ಹೀಗೆ ಮಾತಾಡೋದು ಸರಿಯಲ್ಲ. ಯಾವುದಾದರೂ ವಿಚಾರ ಇದ್ದರೆ ನಾನೇ ಕರೆದು ಪ್ರೆಸ್‌ಗೆ ಹೇಳುತ್ತೇನೆ. ಹೀಗೆ ಯಾರೂ ಕೂಡ ಮಾತಾಡಬಾರದು ಎಂದು ಹೇಳಿದ್ದಾರೆ. ಏನೇ ಇದ್ದರೂ ರಾಹುಲ್ ಗಾಂಧಿ, ಖರ್ಗೆ ಅವರ ಹತ್ತಿರ ಮಾತನಾಡಲಿ ಎಂದಿದ್ದಾರೆ.
ಅವರವರ ಶ್ರಮಕ್ಕೆ ತಕ್ಕ ಸ್ಥಾನ ನಾಯಕರು ಕೊಡ್ತಾರೆ. ಬಹಳ ಶ್ರಮ ಪಟ್ಟು ಡಿಕೆ ಶಿವಕುಮಾರ್ ಪಾರ್ಟಿ ತಂದಿಲ್ಲ. ಕಾರ್ಯಕರ್ತರು ತಂದಿದ್ದು ಪಾರ್ಟಿ. ನಮ್ರತೆಯಿಂದ ಮನವಿ ಮಾಡುತ್ತೇನೆ ಎಂದಿದ್ದಾರೆ.








