ಬಿಟ್ ಕಾಯಿನ್ ಪ್ರಕರಣ | ಪ್ರಿಯಾಂಕ್ ಖರ್ಗೆ ಮೊದಲು ಸತ್ಯವನ್ನು ಅರಿತುಕೊಳ್ಳಲಿ : ಸುಧಾಕರ್
ಶಿವಮೊಗ್ಗ: ಬಿಟ್ ಕಾಯಿನ್ (Bitcoin) ಹೆಸರಲ್ಲಿ ಮೂರನೇ ಸಿಎಂ ವಿಚಾರ ಹಾಸ್ಯಾಸ್ಪದವಾಗಿದ್ದು, ರಾಜಕಾರಣದ ಲಾಭಕ್ಕಾಗಿ ಇಲ್ಲದೇ ಇರುವ ವಿಚಾರ ಸೃಷ್ಟಿಯಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್, ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಟ್ ಕಾಯಿನ್ ಹಗರಣ ಹೊರಕ್ಕೆ ಬಂದರೆ, ರಾಜ್ಯಕ್ಕೆ 3ನೇ ಸಿಎಂ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಪ್ರಿಯಾಂಕ್ ಖರ್ಗೆ ಮೊದಲು ಸತ್ಯವನ್ನು ಅರಿತುಕೊಳ್ಳಲಿ. ಕೇಂದ್ರ ಸರ್ಕಾರವೇ ಈ ಸಂಬಂಧ ಈಗಾಗಲೇ ಸ್ಪಷ್ಟಪಡಿಸಿದೆ. ಈ ಸಂಬಂಧ ಯಾವುದೇ ತನಿಖೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ ಎಂದು ಹೇಳಿದರು.
ಇನ್ನೂ ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಕೇಸ್ ಇನ್ನೂ ತನಿಖಾ ಹಂತದಲ್ಲಿದೆ. ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ಪ್ರಕರಣಕ್ಕೆ ತಾರ್ಕಿಕ ಅಂತ್ಯವನ್ನು ಸರ್ಕಾರ ನೀಡುತ್ತದೆ ಎಂದರು.
ಹಾಗೇ ಸಂಪುಟ ಬದಾವಣೆ ವಿಚಾರವಾಗಿ ಮಾತನಾಡಿ ಸಂಪುಟ ಬದಲಾವಣೆ ಅಧ್ಯಕ್ಷರಿಗೆ, ಸಿಎಂಗೆ ಕೇಳಬೇಕು ಎಂದು ಹೇಳಿದ್ದಾರೆ.