ಸಚಿವ ಕೆಎಸ್ ಈಶ್ವರಪ್ಪರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು : ಸಿದ್ದರಾಮಯ್ಯ Saaksha Tv
ಬೆಂಗಳೂರು: ರಾಷ್ಟ್ರಧ್ವಜದ ಬಗ್ಗೆ ಅವಮಾನ ಮಾಡಿದ ಸಚಿವ ಕೆಎಸ್ ಈಶ್ವರಪ್ಪರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಇಲ್ಲದಿದ್ದರೆ ಸದನದ ಹೊರಗೂ ಒಳಗೂ ಹೋರಾಟ ಮಾಡುತ್ತೇವೆ ಆರ್ಎಸ್ಎಸ್ ಕುಮ್ಮಕ್ಕಿನಿಂದ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯಪಾಲರು ಸಿಎಂಗೆ ಹೇಳಿ ಈಶ್ವರಪ್ಪ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ಇದನ್ನು ಬಿಜೆಪಿಯವರು ಖಂಡನೆ ಮಾಡಿಲ್ಲ, ಸಿಎಂ ಖಂಡನೆ ಮಾಡಿಲ್ಲ. ಸದನದಲ್ಲಿ ನಿಲುವಳಿ ಸೂಚನೆ ಪ್ರಸ್ತಾಪ ಮಾಡಿದಾಗ ಆ ವ್ಯಾಪ್ತಿಯಲ್ಲಿ ಬರಲ್ಲ ಎಂದರು.
ರಾಷ್ಟ್ರ ಧ್ವಜಕ್ಕೆ ಗೌರವ ನೀಡುವ ಬಗ್ಗೆ 1971 ಆಕ್ಟ್ ಪ್ರಕಾರ ದಂಡ ಅಥವಾ ಬಂಧನಕ್ಕೆ ಅವಕಾಶ ಇದೆ. ಸಂವಿಧಾನ, ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದರೆ ಅದು ದೇಶದ್ರೋಹಕ್ಕೆ ಸಮ. ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜದ ಕೆಳಗಡೆ ರೈತ ಧ್ವಜ ಹಾರಿಸಿದಾಗ ರೈತರ ಮೇಲೆ ದೇಶದ್ರೋಹದ ಪ್ರಕರಣ ಹಾಕಲಾಗಿದೆ. ಆದರೆ ಈಶ್ವರಪ್ಪ ವಿರುದ್ಧ ಏಕಿಲ್ಲ? ಎಂದು ಪ್ರಶ್ನಿಸಿದರು.
2002ರವರೆಗೆ ನಾಗಪುರದ ಆರ್ಎಸ್ಎಸ್ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸಿರಲಿಲ್ಲ. ಸಂಘದ ಬೈಠೆಕ್ನಲ್ಲೂ ರಾಷ್ಟ್ರ ಧ್ವಜ ಹಾಕಲ್ಲ. ಈಶ್ವರಪ್ಪ ಕೈಯಲ್ಲಿ ಆರ್ಎಸ್ಎಸ್ನವರೇ ಹೇಳಿಸಿರಬೇಕು. ಕುರಿ ಕಾಯ್ಕೊಂಡು ಇರಬೇಕಾಗುತ್ತೆ, ಇಲ್ಲ ಕಸ ಗುಡಿಸಿಕೊಂಡೋ, ಬೇರೇನೋ ಮಾಡಿಕೊಂಡು ಜೀತದಾಳಾಗಿ ಇರಬೇಕಾಗುತ್ತೆ. ಆರ್ಎಸ್ಎಸ್ನವರ ಗುಲಾಮರಾಗಿದ್ದಾರೆ ಎಂದು ಹೇಳಿದರು.









