Minister Madhuswamy | ಲೆಕ್ಕ ಬರೆದುಕೊಂಡು ಪರಿಹಾರ ನೀಡಲು ಸಾಧ್ಯವಿಲ್ಲ
ತುಮಕೂರು : ಮಳೆಯಿಂದ ಬೆಳೆ ನಷ್ಟವಾಗಿದ್ದರೇ ಲೆಕ್ಕ ಬರೆದುಕೊಂಡು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಸಚಿವ ಮಾಧುಸ್ವಾಮಿ ಭೇಟಿ ನೀಡಿದ್ದರು.
ಈ ವೇಳೆ ರೈತರು ಬೆಳೆ ನಷ್ಟದ ಪರಿಹಾರ ಮೊತ್ತ ಹೆಚ್ಚಿಸುವಂತೆ ಒತ್ತಾಯಿಸಿದರು. ಆಗ ಮಾಧುಸ್ವಾಮಿ, ಮಳೆಯಿಂದ ಬೆಳೆ ನಷ್ಟವಾಗಿದ್ದರೆ ಲೆಕ್ಕ ಬರೆದುಕೊಂಡು ಪರಿಹಾರ ನೀಡಲು ಸಾಧ್ಯವಿಲ್ಲ.
ರೈತರಿಗೆ ಆಗುವ ಬೆಳೆ ನಷ್ಟವನ್ನು ಸರ್ಕಾರ ತುಂಬಿ ಕೊಡುವುದಿಲ್ಲ. ರೈತರು ನೀಡುವ ಲೆಕ್ಕಾಚಾರಗಳಿಗೆಲ್ಲ ಪರಿಹಾರ ಕೊಡಲು ಸಾಧ್ಯವೇ.
ಇದರ ಹೆಸರೇ ಪರಿಹಾರ,ರೈತರಿಗಾದ ನಷ್ಟವನ್ನೆಲ್ಲ ತುಂಬಿಸಿ ಕೊಡುವುದಿಲ್ಲ. ಆಕಸ್ಮಿಕವಾಗಿ ತೊಂದರೆಯಾದಾಗ ಪರಿಹಾರವನ್ನಷ್ಟೇ ನೀಡಲಾಗುತ್ತದೆ. ಇನ್ನು ವಿಮೆ ಮಾಡಿಸಿ ಆ ಮೂಲಕ ಪರಿಹಾರ ಪಡೆದುಕೊಳ್ಳಬೇಕು ಎಂದರು.