Minister Nagesh holding the saffron flag over the national flag| ತಿರಂಗಾದ ಮೇಲೆ ಕೇಸರಿ ಧ್ವಜ ಹಿಡಿದ ಸಚಿವ ನಾಗೇಶ್ : “ಕೈ” ದೂರು
ತುಮಕೂರು : ಸಚಿವ ಬಿ.ಸಿ.ನಾಗೇಶ್ ಅವರು ತ್ರಿವರ್ಣ ಧ್ವಜಕ್ಕಿಂತ ಮೇಲೆ ಕೇಸರಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಚಿವರ ಈ ನಡೆ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಿಪಟೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 180 ಅಡಿ ಉದ್ದದ ತಿರಂಗ ಯಾತ್ರೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಪಾಲ್ಗೊಂಡಿದ್ದರು.
ಈ ಮೆರವಣಿಗೆಯಲ್ಲಿ ರಾಷ್ಟ್ರಧ್ವಜಕ್ಕಿಂತ ಮೇಲೆ ಕೇಸರಿ ಧ್ವಜವನ್ನು ಹಿಡಿದು ಸಚಿವ ನಾಗೇಶ್ ಮೆರವಣಿಗೆ ಎದುರು ಸಾಗಿದ್ದರು.
‘ಇದು ರಾಷ್ಟ್ರದ್ರೋಹಕ್ಕೆ ಸಮಾನಾದ ಅಪರಾಧವಾಗಿದೆ.
ಶಾಲಾ ಮಕ್ಕಳನ್ನು ಇಂತಹ ದೇಶವಿರೋಧಿ ಚಟುವಟಿಕೆಗಳಿಗೆ ಬಳಸಿಕೊಂಡಿರುವುದು ದುರ್ದೈವದ ಸಂಗತಿಯಾಗಿದೆ.
ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಯುವ ಕಾಂಗ್ರೆಸ್ ನಿಂದ ದೂರು ನೀಡಲಾಗಿದೆ.
ಅಂದಹಾಗೆ ಸಚಿವರ ನಡೆಗೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಭಾರಿ ವಿರೋಧ ವ್ಯಕ್ತವಾಗುತ್ತಿದೆ.