Minister Narayana Gowda – ಕಾಂಗ್ರೆಸ್ ನವರಿಗೆ ಕೆಲಸವಿಲ್ಲ
ಮಂಡ್ಯ : ಕಾಂಗ್ರೆಸ್ ನಿಂದ PAY CM ಅಭಿಯಾನ ವಿಚಾರವಾಗಿ ಸಚಿವ ನಾರಾಯಣಗೌಡ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ನವರಿಗೆ ಗೌರವ ಇಲ್ಲ. ಕಾಂಗ್ರೆಸ್ ನವರದ್ದು ಬೇಕಾದಷ್ಟಿದೆ, ನಾವು ಅವುಗಳನ್ನ ಬಿಚ್ಚಿಡ್ತೇವೆ ಎಂದು ಗುಡುಗಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, ಕಾಂಗ್ರೆಸ್ ನವರು ಸಿಎಂ, ಪೇ ಸಿಎಂ ಮಾತನಾಡುತ್ತಾ ಇದ್ದಾರೆ.
ಕಾಂಗ್ರೆಸ್ ನವರಿಗೆ ಕೆಲಸವಿಲ್ಲ. ನಮ್ಮ ಮುಖ್ಯಮಂತ್ರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ದಿನಕ್ಕೆ 16 ಗಂಟೆ ಕೆಲಸ ಮಾಡೊದನ್ನ ನಾನು ಕಣ್ಣಿಂದ ನೋಡಿದ್ದೇನೆ.
ಯಡಿಯೂರಪ್ಪ ಅವರು ಇದ್ದಾಗಲು 16 ಗಂಟೆ ಕೆಲಸ ಮಾಡ್ತಿದ್ದರು. ಅದಕ್ಕೂ ಮೀರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಆರೋಪದ ಬಗ್ಗೆ ಎವಿಡೆನ್ಸ್ ಕೊಡಲಿ, ಅಶ್ವಥ್ ನಾರಾಯಣ್ ಬಗ್ಗೆ ಅಪಾದನೆ ಮಾಡಿದ್ರು ಏನಾಯ್ತು ಎಂದು ಪ್ರಶ್ನಿಸಿದ ಸಚಿವರು, ಇವಾಗ ಪೇ ಸಿಎಂ ಮಾಡ್ತಿದ್ದಾರೆ.
ಎವಿಡೆನ್ಸ್ ಕೊಟ್ಟು ಮಾತನಾಡಲಿ. ಇವರ ಬಗ್ಗೆಯೂ ನಾವು ತೆಗೆಯುತ್ತೇವೆ, ಬೇಕಾದಷ್ಟು ಇದೆ ಎಂದಿದ್ದಾರೆ.