Minister R. Ashok | ಈದ್ಗಾ ಟವರ್ ಚೇಂಜ್ ಆಗಲ್ಲ
ಬೆಂಗಳೂರು : ಈದ್ಗಾ ಮೈದಾನದ ಒಳಗಡೆ ಬಿಬಿಎಂಪಿ ಕಟ್ಟಡ ಇದೆ. ಅಶ್ವಥ ಕಟ್ಟೆ ಇದೆ.
ಸಾಕಷ್ಟು ಮರಗಳಿವೆ,ಯಾವುದು ಬದಲಾಗಲ್ಲ. ಹಾಗೆಯೇ ಮೈದಾನದ ಒಳಗಡೆ ಇರುವ ಈದ್ಗಾ ಟವರ್ ಕೂಡ ಚೇಂಜ್ ಆಗಲ್ಲ, ಅದು ಕೂಡ ಹಾಗೆಯೇ ಇರುತ್ತೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯಿಂದ ಧ್ವಜಾರೋಹಣ ಹಿನ್ನೆಲೆಯಲ್ಲಿ ಇಂದು ಕಂದಾಯ ಸಚಿವ ಆರ್.ಅಶೋಕ್ ಮೈದಾನದ ಸ್ಥಳ ಪರಿಶೀಲನೆ ನಡೆಸಿದರು.
ಅಲ್ಲದೇ ಸ್ಥಳೀಯ ಶಾಲೆ ಭೇಟಿ ನೀಡಿ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಸಚಿವರು, ಯಾವುದೇ ಗೊಂದಲ ಇಲ್ಲ, ಇದು ಯಾವುದೇ ವ್ಯಕ್ತಿಯ ಪ್ರತಿಷ್ಟೆ ಅಲ್ಲ.
ಈ ದೇಶ ಮುಖ್ಯ, ರಾಷ್ಟ್ರ ಧ್ವಜದ ಗೌರವ ಮುಖ್ಯ. ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಬರಬಹುದು. ಯಾವುದೇ ಸಂಘ ಸಂಸ್ಥೆ ಸಂಘಟನೆಗಳ ದ್ವಜಾರೋಹಣಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಧ್ವಜಾರೋಹಣವನ್ನ ಸರ್ಕಾರವೇ ಮಾಡಲಿದೆ. ಇನ್ಮುಂದೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣ ರಾಜ್ಯೋತ್ಸವ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ.
ನಾವೆಲ್ಲರೂ ಭಾರತೀರು ಎಲ್ಲರೂ ಸಹಕಾರ ನೀಡಿ, ಎಲ್ಲರೂ ಸೇರಿ ಸಂಭ್ರಮಾಚರಣೆ ಮಾಡೋಣ. ಇದು ಸಂಪೂರ್ಣ ಸರ್ಕಾರದ ಕಾರ್ಯಕ್ರಮವಾಗಲಿದೆ ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದರು.