R Ashok | ನಾನೇ ನಾಯಕ ಅನ್ನೊದಲ್ಲ, ಮೊದಲು ಜನ ನಾಯಕರಾಗಿ : ಡಿಕೆಶಿಗೆ ಸಾಮ್ರಾಟ್ ಟಾಂಗ್
ಬೆಂಗಳೂರು : ರಾಜ್ಯದಲ್ಲಿ ಒಕ್ಕಲಿಗ ಮುಖ್ಯಮಂತ್ರಿ ಚರ್ಚೆ ಮುನ್ನಲೆಗೆ ಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ಎಸ್ ಎಂ ಕೃಷ್ಣಾ ಬಳಿಕ ಒಕ್ಕಲಿಗ ನಾಯಕ ಉನ್ನತ ಹುದ್ದೆ ಅಲಂಕರಿಸುವ ಸಾಧ್ಯತೆಗಳಿವೆ.
ಹೀಗಾಗಿ ಈ ಬಾರಿ ಒಕ್ಕಲಿಗರು ನನ್ನ ಬೆಂಬಲಕ್ಕೆ ನಿಲ್ಲಬೇಕು ಎಂದು ಮೈಸೂರಿನಲ್ಲಿ ಮನವಿ ಮಾಡಿಕೊಂಡಿದ್ದರು.
ಇದಕ್ಕೆ ಇದೀಗ ಕಂದಾಯ ಸಚಿವ ಆರ್.ಅಶೋಕ್ “ ನಾನೇ ನಾಯಕ ಅನ್ನೋದಲ್ಲ, ಮೊದಲ ಜನ ನಾಯಕರಾಗಿ” ಎಂದು ಟಾಂಗ್ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಆರ್. ಅಶೋಕ್, ನಾನೇ ನಾಯಕ ಅನ್ನೊದಲ್ಲ, ಮೊದಲು ಜನ ನಾಯಕರಾಗಿ.
ಹಿಂದೆ ಸಿದ್ದರಾಮಯ್ಯ ವೀರಶೈವ, ಲಿಂಗಾಯಿತ ಅಂತ ಜಾತಿ ಹೊಡೆದು ಏನಾದ್ರು.
ಅದೇ ಸ್ಥಿತಿ ಡಿ.ಕೆ.ಶಿವಕುಮಾರ್ – ಕುಮಾರಸ್ವಾಮಿಗೆ ಬರುತ್ತೆ.’ ನಿನಗೆ ನೀನೇ ಸರ್ಟಿಫೈಡ್ ಮಾಡೋದಲ್ಲ.

ಹಾಗಾದ್ರೆ ನೀನು ಒಕ್ಕಲಿಗ ಅಲ್ಲ ಅಂತಾನೇ ಅರ್ಥ. ಯಾರು ಒಕ್ಕಲಿಗ ನಾಯಕ ಅಂತ ಜನ ತೀರ್ಮಾನ ಮಾಡಬೇಕು.
ನಾನು ನಾನು ಅಂತ ಹೇಳಿಕೊಂಡ್ರೆ ಅದು ಹಾಗಲ್ಲ ಎಂದು ತಿರುಗೇಟು ನೀಡಿದರು.
ಇನ್ನು ಅವರ ಪಾರ್ಟಿಯಲ್ಲೆ ಒಳ ಜಗಳ ಬೆಂಕಿ ಬಂದು ಬೀದಿಗೆ ಬಿದ್ದಿದೆ. ಜಾತಿ ಆಧಾರದ ಮೇಲೆ ಚುನಾವಣೆಗೆ ಹೋಗಬಾರದು.
ಬರೀ ಒಕ್ಕಲಿಗರು ಓಟ್ ಹಾಕಿದ್ರೆ ಗೆಲ್ತಾರಾ.? ಲಿಂಗಾಯತರು, ದಲಿತರು, ಬ್ರಾಹ್ಮಣರು ಓಟ್ ಹಾಕಿದ್ರೆ ಗೆಲ್ತಾರಾ.?
ಒಬ್ಬ ಮುಖ್ಯಮಂತ್ರಿ ಅಂದ್ರೆ ಈಡಿ ಸಮಗ್ರ ಕರ್ನಾಟಕ ಕನ್ನಡಿಗರ ಮುಖ್ಯಮಂತ್ರಿಯಾಗಬೇಕು’.
ಜಾತಿ ಹೆಸರಲ್ಲಿ ಪ್ಲೇ ಕಾರ್ಡ್ ಬಿಡುವುದು ಸಮಾಜ ಹೊಡೆಯುವ ಕೆಲಸ’.
ಜಾತಿ ಹೊಡೆಯುವುದರಿಂದ ನಿಮಗೆ ಏನು ಹೇಲ್ಪ್ ಹಾಗಲ್ಲ.
ಕೈನಲ್ಲಿ ಇರುವ ಕ್ಷೇತ್ರಗಳು ಸಹ ಹೊರಟು ಹೋಗುತ್ತವೆ ಎಂದು ಹೇಳಿದರು.








