ಕರ್ನಾಟಕ ಜನತೆಗೆ ರಾಮುಲು ಏನು ಅನ್ನೋದು ಗೊತ್ತಿದೆ – ಶ್ರೀರಾಮುಲು
ಬಾಗಲಕೋಟೆ : ಬಳ್ಳಾರಿ ವಿಭಜನೆಯಲ್ಲಿ ಶ್ರೀರಾಮುಲು ಮಂಕಾದ್ರು ಅನ್ನೋ ಪ್ರಶ್ನೆ ಇಲ್ಲ. ರಾಮುಲು ಹೋರಾಟದ ಹಿನ್ನೆಲೆ ಇಂದ ಬಂದಂತವ್ರು. ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಬಳ್ಳಾರಿಯಲ್ಲಿ ಶ್ರೀರಾಮುಲು ಅಂತಹ ವ್ಯಕ್ತಿ ಕಾಂಗ್ರೆಸ್ ನೆಲಸಮ ಮಾಡಿದ್ದಾರೆ ಅದು ಬಿಜೆಪಿ ಶಕ್ತಿ. ರಾಮುಲು ಅನ್ನುವ ವ್ಯಕ್ತಿಯನ್ನು ಯಾರೂ ಕುಗ್ಗಿಸೋಕೆ ಆಗೋಲ್ಲ ಎಂದು ಸಚಿವ ಶ್ರೀರಾಮುಲು ಅವರು ಬಾಗಲಕೋಟೆಯಲ್ಲಿ ಹೇಳಿದ್ದಾರೆ.
ಜೀವನದಲ್ಲಿ ವಿಪರೀತ ಕಷ್ಟವಿದ್ದರೆ ಆಂಜನೇಯ ಸ್ವಾಮಿಗೆ ಈ ವಸ್ತುಗಳನ್ನು ಕೊಡುತ್ತೇನೆ ಎಂದು ಹರಕೆ ಮಾಡಿಕೊಳ್ಳಿ ಮೂರು ವಾರಗಳಲ್ಲಿ ನಿಮ್ಮ ಕೆಲಸ ಆಗುತ್ತದೆ !!!
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮುಷ್ಠಿಗೇರಿ ಗ್ರಾಮ ದಲ್ಲಿ ಮಾತನಾಡಿದ ಅವರು, ನೆಲಕ್ಕೆ ಚೆಂಡು ಹಾಕಿದರೆ ಹೇಗೆ ಸಿಡಿಯುತ್ತೇ ಹಾಗೆ ರಾಮುಲು. ನಾನು ಸುಮ್ಮನೆ ಇದ್ದೀನಿ ಅಂದ್ರೆ, ಯಾರೂ ಅಪಾರ್ಥ ತಿಳ್ಕೊಳ್ಳೋದು ಬೇಕಾಗಿಲ್ಲ. ಕರ್ನಾಟಕ ಜನತೆಗೆ ರಾಮುಲು ಏನು ಅನ್ನೋದು ಗೊತ್ತಿದೆ. ರಾಮುಲು ಒಂದು ಜಿಲ್ಲೆ, ತಾಲೂಕಿನ ಲೀಡರ್ ಅಲ್ಲ. ರಾಮಲು ಅವ್ರನ್ನ ರಾಜ್ಯಕ್ಕೆ ಲೀಡರ್ ಆಗಿ ಗುರ್ತಿಸಿದ್ದಾರೆ. ನೆಲಕ್ಕೆ ಹಾಕುವ ಪ್ರಯತ್ನ ಯಾರೇ ಮಾಡಿದ್ರೂ ಸಹ, ದೇವರು ನನಗೆ ಶಕ್ತಿ ಕೊಟ್ಟಿದ್ದಾನೆ. ನೆಲಕ್ಕೆ ಬಿದ್ರೂ ಅಷ್ಟೇ ವೇಗವಾಗಿ ಮೇಲಕ್ಕೆ ಜಿಗಿಯುವ ವಿಶ್ವಾಸ ನನ್ನಲ್ಲಿದೆ. ನೆಲಕ್ಕೆ ಬೀಳಿಸಿದ್ದಾರೆ ಅಂತಲ್ಲ. ನೆಲಕ್ಕೆ ಬಿದ್ರೆ ಮೇಲೇಳುವ ಶಕ್ತಿ ಭಗವಂತ, ರಾಜ್ಯದ ಜನತೆ ಕೊಟ್ಟಿದೆ ಎಂದು ಪರೋಕ್ಷವಾಗಿ ಪಕ್ಷದಲ್ಲಿ ತಮ್ಮನ್ನ ಕಡೆಗಣಿಸಲಾಗ್ತಿದೆ ಎಂದು ರಾಮುಲು ಸುಳಿವು ನೀಡಿದ್ದಾರೆ.
`ಪ್ರಧಾನಿ ನರೇಂದ್ರ ಮೋದಿ ಹೇಡಿ’ : ರಾಹುಲ್ ಗಾಂಧಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








