ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಶಾಸಕ ಉಮೇಶ್ ಕತ್ತಿ ತಮ್ಮ ಕತ್ತಿ ವರಸೆ ಶುರು ಮಾಡಿದ್ದೇ ತಡ , ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಚರ್ಚೆಗಳು ಶುರುವಾಗಿವೆ. ನಿನ್ನೆಯಷ್ಟೇ ಕೆಲ ಶಾಸಕರು ಯಡಿಯೂರಪ್ಪನವರು ನಮ್ಮ ನಾಯಕ ಅಲ್ಲ. ಅಲ್ಲದೆ ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ ಮಾತ್ರ ಅಲ್ಲ ಎಂದು ಹೇಳಿದ್ದರು.
ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರ ಕೆಲ ಶಾಸಕರು ಬ್ಯಾಟಿಂಗ್ ಮಾಡಿದ್ದಾರೆ. ಸಚಿವ ವಿ. ಸೋಮಣ್ಣ ಯಡಿಯೂರಪ್ಪನವರು ಲಿಂಗಾಯತ ಸಮುದಾಯದ ನಾಯಕ ಮಾತ್ರವಲ್ಲ. ಅವರು, ಎಲ್ಲಾ ಸಮುದಾಯಗಳ ನಾಯಕ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಸಚಿವ ವಿ.ಸೋಮಣ್ಣ, ಪಕ್ಷದಲ್ಲಿ ಯಡಿಯೂರಪ್ಪ ಅವರ ವಿರುದ್ದ ಯಾರು ಸಹ ಅಸಮಾಧಾನ ಹೊಂದಿಲ್ಲ. ಅವರು ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಜೊತಗೆ ಉತ್ತಮ ಆಡಳಿತ ನಡೆಸುತ್ತಿದ್ದರು. ಒಂದು ವೇಳೆ ಪಕ್ಷದಲ್ಲಿ ಯಾರಿಗಾದರೂ ಅಸಮಾಧಾನ ಇದ್ದರೆ ಅದನ್ನು ಯಡಿಯೂರಪ್ಪನವರು ಸರಿಪಡಿಸುತ್ತಾರೆ. ಅವರಿಗೆ ಇರುವ ಅನುಭವದಲ್ಲಿ ಇತಂಹ ಸಾಕಷ್ಟು ಸಮಸ್ಯೆಗಳನ್ನು ಬಗೆ ಹರಿಸಿದ್ದಾರೆ. ನಾವೆಲ್ಲ ಅವರ ಜೊತೆ ಇದ್ದೇವೆ. ಯಡಿಯೂರಪ್ಪ ಲಿಂಗಾಯತ ಸಮುದಾಯ ನಾಯಕ ಅಲ್ಲ, ಅವರು ಜಾತ್ಯಾತೀತ ನಾಯಕ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.








