ಒಬ್ಬರು 300, ಇನ್ನೊಬ್ಬರು 700 : ಬ್ಲ್ಯಾಕ್ ಫಂಗಸ್ ಕೇಸ್ ಬಗ್ಗೆ ಸಚಿವರಲ್ಲೇ ಗೊಂದಲ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಜನರ ಜೀವ ಮತ್ತು ಜೀವನ ಎರಡನ್ನೂ ಕಸಿದುಕೊಂಡಿದೆ, ಕಸಿದುಕೊಳ್ಳುತ್ತಿದೆ.
ಸದ್ಯ ಕೊರೊನಾದಿಂದಲೇ ತತ್ತರಿಸಿ ಹೋಗಿರುವ ಜನರಿಗೆ ಇದೀಗ ರಾಜ್ಯದಲ್ಲಿ ಬ್ಲಾಕ್, ವೈಟ್ ಫಂಗಸ್ ಕೇಸ್ ಗಳು ಪತ್ತೆಯಾಗಿರುವುದು ತಲೆಗೆ ಹುಳ ಬಿಟ್ಟಂಗೆ ಆಗಿದೆ.
ಒಂದು ಕಡೆ ಕೊರೊನಾ ಇನ್ನೊಂದು ಕಡೆ ಬ್ಲ್ಯಾಕ್ ಫಂಗಸ್ ಯಿಂದಾಗಿ ಜನರು ಗೊಂದಲದಲ್ಲಿದ್ದಾರೆ.
ಈ ಮಧ್ಯೆ ರಾಜ್ಯದಲ್ಲಿ ಎಷ್ಟು ಮಂದಿಗೆ ಸೋಂಕು ಕಾಣಿಸಿದೆ ಎಂಬುದರ ನಿಖರ ಮಾಹಿತಿ ಸರ್ಕಾರ ಮಟ್ಟದಲ್ಲಿ ಇಲ್ಲ. ಬ್ಲ್ಯಾಕ್ ಫಂಗಸ್ ಬಗ್ಗೆ ಸಚಿವರು ಗೊಂದಲ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು 300 ಬ್ಲಾಕ್ ಫಂಗಸ್ ಪತ್ತೆ ಅಂದರೆ ಇತ್ತ ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಕಳೆದ 7 ದಿನಗಳಲ್ಲಿ 700 ಬ್ಲ್ಯಾಕ್ ಫಂಗಸ್ ಪೀಡಿತರು ರಾಜ್ಯದಲ್ಲಿ ಪತ್ತೆಯಾಗಿದ್ದಾರೆ ಅಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವರ ಈ ಹೇಳಿಕೆಗಳನ್ನು ನೋಡಿದ್ರೆ ಬ್ಲ್ಯಾಕ್ ಫಂಗಸ್ ವಿಚಾರದಲ್ಲಿ ಸರ್ಕಾರದಲ್ಲಿ ಗೊಂದಲ ಇರುವುದು ಸ್ಪಷ್ಟವಾಗಿ ತಿಳಿಯುತ್ತಿದೆ.
ಈ ಮಧ್ಯೆ ರಾಜ್ಯದಲ್ಲಿ 300ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ಸೋಂಕಿತರು ಕಂಡು ಬಂದಿದ್ದಾರೆ.
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.