ವೈದ್ಯಲೋಕದ ಪವಾಡ : ವ್ಯಕ್ತಿಗೆ ಬೇರೆಯ ಮುಖ, ಕೈಗಳ ಜೋಡಣೆ..!
ಸೈನ್ಸ್ ಅಂಡ್ ಟೆಕ್ನಾಲಜಿ, ವೈದ್ಯಕೀಯ ಲೋಕ ಎಷ್ಟು ಮುಂದುವರೆದಿದೆ ಅನ್ನೋದಕ್ಕೆ ಅನೇಕ ಪುರಾವೆಗಳು ನಮ್ಮ ಕಣ್ಮುಂದಿವೆ. ವೈದ್ಯಲೋಕದ ಅನೇಕ ಪವಾಡಗಳಿಗೆ ನಾವೂ ನೀವು ಸಾಕ್ಷಿಯಾಗಿದ್ದೇವೆ. ಇದೀಗ ಅಂತಹದ್ದೇ ಒಂದು ಘಟನೆ ನಮ್ಮೆಲ್ಲರನ್ನ ಒಂದು ಕ್ಷಣ ಹೀಗೂ ಇರುತ್ತಾ ಅಂತ ಯೋಚಿಸೋ ಹಂತಕ್ಕೆ ತಳ್ಳಿಬಿಡುತ್ತೆ. ಹೌದು ರಸ್ತೆ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 22 ವರ್ಷದ ಯುವಕನೊಬ್ಬನಿಗೆ ಬೇರೆಯ ಮುಖ ಮತ್ತು 2 ಕೈಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ.
ಪೊಲಿಯೋ ಲಸಿಕೆ ಬದಲು ಸ್ಯಾನಿಟೈಸರ್ : ಪ್ರಕರಣಕ್ಕೆ ಟ್ವಿಸ್ಟ್ : ವೈದ್ಯನ ಕೃತ್ಯದ ಅಸಲಿಯತ್ತು ಬಯಲು..!
ಹೌದು ನಂಬಲಸಾಧ್ಯವೇ ಆದ್ರೂ ಇದು ನಿಜ. ವೈದ್ಯಕೀಯ ತಂಡ ನೀಡಿರುವ ಮಾಹಿತಿಯ ಪ್ರಕಾರ ಈ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾದ ಜಗತ್ತಿನ ಮೊದಲ ವ್ಯಕ್ತಿ ಈತನೇ ಆಗಿದ್ದಾನೆ. 23 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು, ನರ್ಸ್ಗಳು ಸೇರಿದಂತೆ 96 ಆರೋಗ್ಯ ಸಿಬ್ಬಂದಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಫ್ರೀ ವೈ-ಫೈ ರೋಟರ್ : ಹೊಸ ಗ್ರಾಹಕರನ್ನ ಸೆಳೆಯಲು TATA SKY ಮಾಸ್ಟರ್ ಪ್ಲಾನ್..!
ಈತನ ಹೆಸರು ಜೋ ಡಿಮಿಯೊ. 2018ರ ಜುಲೈ ನಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಅವರ ಕಾರು ಪಲ್ಟಿಯಾಗಿ ಸ್ಫೋಟಿಸಿದೆ. ಪರಿಣಾಮ ಅವರ ದೇಹದ ಶೇ 80ಕ್ಕೂ ಅಧಿಕ ಭಾಗಕ್ಕೆ ಗಂಭೀರವಾಗಿ ಪೆಟ್ಟು ತಗುಲಿತ್ತು. ಅವರ ಬೆರಳಿನ ತುದಿಗಳು ಮುರಿದಿದ್ದವು, ಮುಖದ ಮೇಲೆ ಆಳವಾದ ಗಾಯಗಳಾಗಿದ್ದವು. ಅವರ ತುಟಿಗಳು ಮತ್ತು ಕಣ್ಣು ರೆಪ್ಪೆಗಳು ಎಲ್ಲವೂ ಕಳೆದುಕೊಂಡಿದ್ದರು. ಅದು ಅವರ ಕಣ್ಣ ದೃಷ್ಟಿಯ ಮೇಲೆ ಪರಿಣಾಮ ಬೀರಿತು ಹಾಗೂ ಅವರು ಸಾಮಾನ್ಯ ಹಾಗೂ ಸ್ವತಂತ್ರ ಜೀವನ ನಡೆಸುವುದು ಅಸಾಧ್ಯವಾಗಿತ್ತು.
ಅಮೆಜಾನ್ ಪ್ರೈಂ ಸದಸ್ಯರಿಗೆ ಭರ್ಜರಿ ಗಿಫ್ಟ್ : ಏನಂತೀರಾ…!
ಬಳಿಕ ಅವರಿಗೆ ಸರಿ ಹೊಂದುವ ಓರ್ವ ದೇಹ ದಾನಿಯನ್ನು ತೀವ್ರ ಶೋಧದ ಬಳಿಕ ಪತ್ತೆಹಚ್ಚಚ್ಚಿ , ಆ ವ್ಯಕ್ತಿಯ ಎರಡೂ ಕೈಗಳು ಮತ್ತು ಹಣೆ, ಹುಬ್ಬು, ಎರಡೂ ಕಿವಿಗಳು, ಮೂಗು, ಕಣ್ಣು ರೆಪ್ಪೆಗಳು, ತುಟಿಗಳು ಮತ್ತು ಅದರ ಜೊತೆಗಿನ ಬುರುಡೆ ಸೇರಿದಂತೆ ಸಂಪೂರ್ಣ ಮುಖವನ್ನು ಜೋ ಡಿಮಿಯೊಗೆ ಜೋಡಿಸಲಾಯಿತು. ಹೀಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel