IPLನಲ್ಲಿ ಭಾಗವಹಿಸದೇ ಇರುವ ಕಾರಣ ಬಿಚ್ಚಿಟ್ಟ ಸ್ಟಾರ್ಕ್ mitchell-starc saaksha tv
ಈ ಬಾರಿಯ ಐಪಿಎಲ್ ನಲ್ಲಿ ಭಾಗವಹಿಸಲು ನಿರ್ಧರಿಸಿ, ಕೊನೆ ಕ್ಷಣದಲ್ಲಿ ಹಿಂದೆ ಸರಿದ ಆಸ್ಟ್ರೇಲಿಯಾದ ಸ್ಪೀಡ್ ಗನ್ ಮಿಚೆಲ್ ಸ್ಟಾರ್ಕ್, ತಮ್ಮ ನಿರ್ಧಾರಕ್ಕೆ ಕಾರಣ ಬಿಚ್ಚಿಟ್ಟಿದ್ದಾರೆ.
ಕುಟುಂಬಕ್ಕೆ ದೂರವಾಗಿ 22 ವಾರ ಕಳೆಯುವುದು ತನ್ನ ಕೈಯಲ್ಲಿ ಆಗುವುದಿಲ್ಲ ಎಂದಿದ್ದಾರೆ ಸ್ಟಾರ್ಕ್. ಹೀಗಾಗಿಯೇ ಮೆಗಾ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡಿಲ್ಲ.
ಐಪಿಎಲ್‌ಗಿಂತ ನನಗೆ ದೇಶವೇ ಮುಖ್ಯ, ಎಂದಿಗೂ ಆಸ್ಟ್ರೇಲಿಯಾಗೆ ನನ್ನ ಮೊದಲ ಆದ್ಯತೆಯಾಗಿರುತ್ತದೆ ಎಂದಿದ್ದಾರೆ.
ಅಂದಹಾಗೆ ಸ್ಟಾರ್ಕ್ ಕೊನೆಯ ಬಾರಿಗೆ 2015 ರಲ್ಲಿ ಐಪಿಎಲ್‌ನಲ್ಲಿ ಆಡಿದ್ದರು. ಆ ಋತುವಿನಲ್ಲಿ ಸ್ಟಾರ್ಕ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು.
2018 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅವರಿಗೆ ರೂ. 9.4 ಕೋಟಿ ಕೊಟ್ಟು ಖರೀದಿಸಿದ್ದರೂ ಗಾಯದ ಸಮಸ್ಯೆಯಿಂದ ಇಡೀ ಸೀಸನ್‌ನಿಂದ ಹೊರಗುಳಿದಿದ್ದರು.
ಆ ನಂತರ ಅವರು ವಿವಿಧ ಕಾರಣಗಳಿಗಾಗಿ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಸ್ಟಾರ್ಕ್ (ಆರ್‌ಸಿಬಿ ಪರ) ಐಪಿಎಲ್‌ನಲ್ಲಿ 27 ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ.