Mithali Raj Retirement:ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮಿಥಾಲಿ ರಾಜ್ ಗುಡ್ ಬೈ
ಭಾರತ ಮಹಿಳಾ ಕ್ರಿಕೆಟ್ ನ ಏಕದಿನ, ಟೆಸ್ಟ್ ತಂಡಗಳ ಕ್ಯಾಪ್ಟನ್ ಮಿಥಾಲಿ ರಾಜ್ ರಿಟೈರ್ಮೆಂಟ್ ಪ್ರಕಟಿಸಿದ್ದಾರೆ.
ಅಲ್ಲದೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈ ಸಂಬಂಧ ಮಿಥಾಲಿ ರಾಜ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ನನ್ನ ಕ್ರಿಕೆಟ್ ಬದುಕಿನಲ್ಲಿ ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು.
ಟೀಂ ಇಂಡಿಯಾದ ಜರ್ಸಿಯಲ್ಲಿ ದೇಶವನ್ನು ಪ್ರತಿನಿದಿಸಿದ್ದು, ನನಗೆ ಸಿಕ್ಕ ದೊಡ್ಡ ಗೌರವವಾಗಿದೆ. ನನ್ನ ಜರ್ನಿಯಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ್ದೇನೆ.
23 ವರ್ಷಗಳಿಂದ ಸವಾಲುಗಳನ್ನು ಎದುರಿಸುತ್ತಾ ಜೀವನವನ್ನು ಆಸ್ವಾದಿಸುತ್ತಾ ಇಲ್ಲಿಯವರೆಗೂ ಬಂದಿದ್ದೇನೆ. ಪ್ರತಿ ಸವಾಲಿನಿಂದ ಹೊಸ ಅನುಭವವನ್ನು ಪಡೆದುಕೊಂಡಿದ್ದೇನೆ.
ಪ್ರತಿ ಪ್ರಯಾಣದಂತೆ ಈ ಪ್ರಯಾಣ ಕೂಡ ಒಂದು ದಿನ ನಿಂತು ಹೋಗಬೇಕಾಗಿರುವುದಲ್ಲವೇ.

ಇಂದು ನಾನು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನಾನು ಎಲ್ಲಾ ಸ್ವರೂಪ ಕ್ರಿಕೆಟ್ ನಿಂದ ದೂರ ಉಳಿಯುತ್ತಿದ್ದೇನೆ.
ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗಲೂ ನನ್ನ ಅತ್ಯುತ್ತಮ ಪ್ರದರ್ಶನ ತೋರಿ ತಂಡ ಗೆಲ್ಲಿಸಬೇಕು ಎಂದು ಬಯಸಿದ್ದೆ. ಈಗ ಆಟಕ್ಕೆ ವಿದಾಯ ಹೇಳುವ ಸಮಯ.
ಸಾಕಷ್ಟು ಪ್ರತಿಭಾವಂತ ಯುವ ಕ್ರಿಕೆಟಿಗರು ಬರಬೇಕು. ಭಾರತೀಯ ಮಹಿಳಾ ಕ್ರಿಕೆಟ್ ನ ಭವಿಷ್ಯ ಉಜ್ವಲವಾಗಿ ಬೆಳಗಬೇಕು ಎಂದು ಮಿಥಾಲಿ ಭಾವುಕರಾಗಿ ನುಡಿದಿದ್ದಾರೆ.
1999 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಮಿಥಾಲಿ ರಾಜ್, ತಂಡದ ಆಟಗಾರರಾಗಿ, ನಾಯಕರಾಗಿ ಸಾಕಷ್ಟು ಸಾಧನೆ ಮಾಡಿದ್ದಾರೆ.
232 ಏಕದಿನ ಪಂದ್ಯಗಳಲ್ಲಿ ಮಿಥಾಲಿ 7805 ರನ್ ಗಳಿಸಿದ್ದಾರೆ. ಭಾರತದ ಪರ 12 ಟೆಸ್ಟ್ ಮತ್ತು 89 ಟಿ 20 ಪಂದ್ಯಗಳನ್ನಾಡಿದ್ದಾರೆ.








