ಮೂರು ಮಾದರಿಯ ಕ್ರಿಕೆಟ್ ನಲ್ಲಿ 10 ಸಾವಿರ ರನ್ ದಾಖಲಿಸಿದ ಭಾರತದ ಮಿಥಾಲಿ ರಾಜ್..! mithaliraj Indian woman cricketer
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಹೆಸರು ದಾಖಲೆ ಪಟ್ಟಿಗೆ ಸೇರಿಕೊಂಡಿದೆ.
ಮಹಿಳಾ ಕ್ರಿಕೆಟ್ ನಲ್ಲಿ ಭಾರತದ ಪರ 10 ಸಾವಿರ ರನ್ ದಾಖಲಿಸಿದ್ದ ಮೊದಲ ಆಟಗಾರ್ತಿ ಹಾಗೂ ವಿಶ್ವದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಿಥಾಲಿ ರಾಜ್ ಪಾತ್ರರಾಗಿದ್ದಾರೆ.
#saakshatv #mithaliraj #Indian woman cricketer
ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ ಈ ಸಾಧನೆ ಮಾಡಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಮಿಥಾಲಿ ರಾಜ್ 10 ಸಾವಿರ ಅಂತಾರಾಷ್ಟ್ರೀಯ ರನ್ ಪೇರಿಸಿರುವ ಗೌರವಕ್ಕೂ ಪಾತ್ರರಾಗಿದ್ದಾರೆ.
ಮಿಥಾಲಿ ರಾಜ್ ಭಾರತದ ಪರ ಹತ್ತು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. 214 ರನ್ ಗರಿಷ್ಠ ಸ್ಕೋರು. ಒಟ್ಟು 663 ರನ್ ಗಳಿಸಿದ್ದಾರೆ.
ಇನ್ನು 89 ಟಿ-ಟ್ವೆಂಟಿ ಪಂದ್ಯಗಳಲ್ಲಿ ಮಿಥಾಲಿ ರಾಜ್ 37.52ರ ಸರಾಸರಿಯಲ್ಲಿ 2364 ರನ್ ಪೇರಿಸಿದ್ದಾರೆ.
ಇನ್ನು ಏಕದಿನ ಕ್ರಿಕೆಟ್ ನಲ್ಲಿ ಮಿಥಾಲಿ ರಾಜ್ ರನ್ ಮಳೆಯನ್ನೇ ಸುರಿಸಿದ್ದಾರೆ. 212 ಏಕದಿನ ಪಂದ್ಯಗಳಲ್ಲಿ ಮಿಥಾಲಿ ರಾಜ್ 6974 ರನ್ ದಾಖಲಿಸಿದ್ದಾರೆ. ಇದ್ರಲ್ಲಿ ಏಳು ಶತಕ ಹಾಗೂ 54 ಅರ್ಧಶತಕಳಿವೆ.
ವಿಶ್ವ ಮಹಿಳಾ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ನ ಚಾರ್ಲೆಟ್ ಎಡ್ವಡ್ರ್ಸ್ ಅವರು ಒಟ್ಟು 309 ಪಂದ್ಯಗಳಲ್ಲಿ 10273 ರನ್ ದಾಖಲಿಸಿದ್ದಾರೆ.
ಮಿಥಾಲಿ ರಾಜ್ ಒಟ್ಟು 311 ಪಂದ್ಯಗಳಲ್ಲಿ 10,001 ರನ್ ಗಳಿಸಿದ್ದಾರೆ. ಹಾಗೇ ನ್ಯೂಜಿಲೆಂಡ್‍ನ ಸುಝಿಯ್ ಬ್ಯಾಟ್ಸ್ 7849 ರನ್, ವೆಸ್ಟ್ ಇಂಡೀಸ್ ನ ಸ್ಟಾಫಾನಿ ಟೇಲರ್ 7816 ಹಾಗೂ ಆಸ್ಟ್ರೇಲಿಯಾದ ಮೆಗ್ ಲಾನಿಂಗ್ 6900 ರನ್ ಪೇರಿಸಿದ್ದಾರೆ.
saakshatv mithaliraj Indian woman cricketer








