Mithali Raj : ಸಚಿನ್ ಜೊತೆಗೂಡಿದ ಮಿಥಾಲಿ
ಮಹಿಳಾ ಕ್ರಿಕೆಟ್ ನ ಸೂಪರ್ ಸ್ಟಾರ್ ಮಿಥಾಲಿ ರಾಜ್ ಅವರು ತಮ್ಮ ಕ್ರಿಕೆಟ್ ಬದುಕಿನ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.
ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಿಥಾಲಿ ರಾಜ್ ಪಾತ್ರರಾಗಿದ್ದಾರೆ.
ಕಳೆದ ಎರಡು ದಶಕಗಳಿಂದಲೂ ಟೀಂ ಇಂಡಿಯಾದ ಮಹಿಳಾ ತಂಡದಲ್ಲಿ ಆಡುತ್ತಿರುವ ಮಿಥಾಲಿ ರಾಜ್, 2000ನೇ ಸಾಲಿನಲ್ಲಿ ತಮ್ಮ ಚೊಚ್ಚಲ ಏಕದಿನ ವಿಶ್ವಕಪ್ ಪಂದ್ಯಾವಳಿ ಆಡಿದ್ದರು.
ಇದಾದ ನಂತರದಲ್ಲಿ 2005, 2009, 2013, 2017 ಹಾಗೂ ಪ್ರಸ್ತುತ ನ್ಯೂಜಿ಼ಲೆಂಡ್ನಲ್ಲಿ ನಡೆಯುತ್ತಿರುವ 2022ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಮೂಲಕ ಈ ಹಿರಿಮೆಗೆ ಭಾಜನರಾಗಿದ್ದಾರೆ.
ಈ ಮೂಲಕ ಕಿವೀಸ್ ಮಹಿಳಾ ತಂಡದ ಮಾಜಿ ಆಟಗಾರ್ತಿ ಡೆಬ್ಬಿ ಹಾಕ್ಲಿ(1982-2000) ಅವರ 5 ವಿಶ್ವಕಪ್ ಆಡಿದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಈಡೇರುತ್ತಾ ಮಿಥಾಲಿ ಕನಸು….?
ಭಾರತ ಕ್ರಿಕೆಟ್ ತಂಡದ ಪರ ಕಳೆದ ಎರಡು ದಶಕಗಳಿಂದದ ಕ್ರಿಕೆಟ್ ಆಡುತ್ತಿರುವ ಮಿಥಾಲಿ ರಾಜ್ ಈವರೆಗೂ ವಿಶ್ವಕಪ್ ಗೆದ್ದಿಲ್ಲ.
ಈ ಹಿಂದೆ ಸಚಿನ್ ತೆಂಡುಲ್ಕರ್ ಕೂಡ ಆರನೇ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಶ್ವಕಪ್ ಗೆದ್ದಿದ್ದರು.
ಅದೇ ರೀತಿ ಸಚಿನ್ ಅವರಂತೆ 6ನೇ ಏಕದಿನ ವಿಶ್ವಕಪ್ ಆಡುತ್ತಿರುವ ಮಿಥಾಲಿ ರಾಜ್ ಅವರ ವಿಶ್ವಕಪ್ ಗೆಲುವಿನ ಕನಸು ಈ ವಿಶ್ವಕಪ್ನಲ್ಲಿ ಸಾಕಾರಗೊಳ್ಳುವುದೇ ಕಾದು ನೋಡಬೇಕಿದೆ. Mithali Raj Scripts Incredible World Cup Record