ಕಾನೂನು ತಜ್ಞ ಎಂ.ಕೆ.ವಿಜಯ್ ಕುಮಾರ್ ಅವರಿಗೆ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ Kannada Rajyotsava udupi
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯು ಕಾರ್ಕಳದ ಖ್ಯಾತ ವಕೀಲ ಎಂ.ಕೆ.ವಿಜಯ್ ಕುಮಾರ್ ಸೇರಿದಂತೆ 65 ಮಂದಿ ಸಾಧಕರನ್ನು ಅರಸಿ ಬಂದಿವೆ. Kannada Rajyotsava udupi
ಸಾಮಾಜಿಕ ತುಡಿತ, ಕ್ರಿಯಾಶೀಲತೆ, ಪರಿಶ್ರಮಗಳ ಸಾಕಾರ ಮೂರ್ತಿ ಎಂ. ಕೆ. ವಿಜಯ್ ಕುಮಾರ್ ಮೈಸೂರು ಮಹಾರಾಜರಿಂದ ಮಹಾ ಆಸ್ಥಾನ ವಿದ್ವಾನ್ ಬಿರುದು ಪಡೆದ ದಿ. ಸುಬ್ಬಯ್ಯ ಶಾಸ್ತ್ರಿ ದಿ. ಎಂ.ಕೆ. ಲಕ್ಷ್ಮಿ ಮತಿ ಅಮ್ಮನವರ ಆರನೆಯ ಸುಪುತ್ರರು.
ತಾರುಣ್ಯದಲ್ಲೇ ತಮ್ಮ ಪ್ರಖರವಾದ ಮಾತುಗಾರಿಕೆಯಿಂದ ಗುರುತಿಸಲ್ಪಟ್ಟಿದ ಇವರು ತಮ್ಮ ಕನಸಿನ ವಕೀಲ ವೃತ್ತಿಯನ್ನು ಕೈಗೊಂಡರು. ಅವರ ಸಾಹಿತ್ಯಿಕ, ಸಾಂಸ್ಕೃತಿಕ ಪರಿಸರ ಅವರನ್ನು ಜನಪರ ಚಿಂತನೆಯ ಯುವ ನಾಯಕನಾಗಿ ಬೆಳೆಸಿತು.
1967ರಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದ ಇವರು ವೃತ್ತಿರಂಗದಲ್ಲಿ ಯುವ ವಕೀಲರಿಗೆ ಮಾದರಿಯಾಗಿ ಗುರುತಿಸಲ್ಪಟ್ಟವರು.
ವಕೀಲ ವೃತ್ತಿಯನ್ನು ಉದ್ಯೋಗವೆಂದು ಭಾವಿಸದೆ ಸಮಾಜ ಸೇವೆಗೆ ತನಗೆ ಭಗವಂತ ಕಲ್ಪಿಸಿದ ಅವಕಾಶವೆಂದೇ ತಿಳಿದವರು. ನ್ಯಾಯದ ಪರವಾಗಿ, ಅಸಹಾಯಕರು, ಆರ್ಥಿಕವಾಗಿ ನೊಂದವರ ಪರವಾಗಿ ನಿಂತು ಉಚಿತವಾಗಿ ಕಾನೂನಿನ ನೆರವು ನೀಡಿದವರು.
1973ರಲ್ಲಿ ಜನಸಂಘ ಪಕ್ಷದ ಕಾರ್ಯಕರ್ತನಾಗಿ ಗುರುತಿಸಿ ಕೊಂಡ ಇವರು ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಮುನ್ನುಗ್ಗಿದರು. 1978ರಲ್ಲಿ ಜನತಾ ಪಕ್ಷದ ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಆಯ್ಕೆಗೊಂಡರು. ಜನತಾ ಪಕ್ಷ ಭಾರತೀಯ ಜನತಾ ಪಕ್ಷವಾದಾಗ ಮತ್ತೊಮ್ಮೆ ಕಾರ್ಕಳದ ವಿಧಾನ ಸಭೆಗೆ ಅಭ್ಯರ್ಥಿಯಾಗಿ ಆಯ್ಕೆಯಾದರೂ ಅಲ್ಪ ಅಂತರದಿಂದ ಶ್ರೀ ವೀರಪ್ಪ ಮೊಯಿಲಿ ಯವರ ಎದುರು ಸೋತರೂ ರಾಜ್ಯದಲ್ಲಿ ಅತ್ಯಧಿಕ ಮತ ಪಡೆದ ಮೂರನೆಯ ಅಭ್ಯರ್ಥಿಯಾಗಿದ್ದರು.
ಇವರ ಕೈಕೆಳಗೆ ಅಸಂಖ್ಯಾತ ಕಿರಿಯ ವಕೀಲರು, ತರಬೇತು ಪಡೆದಿದ್ದು, ಅವರ ಶಿಷ್ಯರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನಿಯುಕ್ತಿ ಹೊಂದಿದ್ದಾರೆ ಮಾತ್ರವಲ್ಲ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿ ಇತ್ತೀಚೆಗೆ ನೇಮಕಗೊಂಡ ಜಸ್ಟೀಸ್ ಅಬ್ದುಲ್ ನಜೀರ್ ವರು ಇವರ ಶಿಷ್ಯರು. ಇವರು ಅವಿಭಜಿತ ದ.ಕ ಜಿಲ್ಲಾ ಬಾರ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ತಮ್ಮ ಕಾರ್ಯ ವೈಖರಿಯಿಂದ ಸರ್ವರ ಅಭಿಮಾನಕ್ಕೆ ಪಾತ್ರರಾದವರು.
ಸಾಹಿತ್ಯ ಪ್ರಿಯರಾದ ಇವರ ಮಾರ್ಗದರ್ಶನ, ನೇತೃತ್ವದಲ್ಲಿ ತಾಲ್ಲೂಕು, ಜಿಲ್ಲಾ, ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ನಡೆದಿದೆ. ಸಾಹಿತ್ಯ ಸೇವೆಗೆ ತನ್ನನ್ನೇ ಮುಡಿಪಾಗಿಟ್ಟುಕೊಂಡ ಇವರ ಸಾರಥ್ಯ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ವಿಗೆ ಕಾರಣ. ಅನೇಕ ವಿಚಾರಗೋಷ್ಠಿ, ಕಾರ್ಯಗಾರಗಳಲ್ಲಿ ಪ್ರಬಂಧ ಮಂಡನೆ ಮಾಡಿ ಜನ ಮೆಚ್ಚುಗೆ ಗಳಿಸಿದ ಹೆಗ್ಗಳಿಕೆ ಇವರದು. ಪ್ರಕಾಂಡ ಪಂಡಿತರಾದ ಇವರ ನಿರರ್ಗಳ ವಾಗ್ವೈಕರಿ ಸಭಿಕರನ್ನು ಮಂತ್ರ ಮುಗ್ದವಾಗಿಸುವಂತಹದ್ದು. ಸಾಹಿತ್ಯ ಸೇವೆಗೆ ತನ್ನನ್ನೇ ಮುಡಿಪಾಗಿಟ್ಟುಕೊಂಡ ಇವರು ತುಳುನಾಡಿನ ಕಂಬಳ ಕ್ರೀಡೆಯು ಪ್ರೋತ್ಸಾಹಕರು. ಅನೇಕ ಶಿಕ್ಷಣ ಸಂಸ್ಥೆಗಳ ರೂವಾರಿಯಾಗಿ ಆ ಮೂಲಕ ಶಿಕ್ಷಣ ಕ್ರಾಂತಿಗೆ ಕೈಜೋಡಿಸಿದವರು.
ಕಾರ್ಕಳದ ಬಾಹುಬಲಿಯ ಮಸ್ತಕಾಭಿಷೇಕದ ಪ್ರಧಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ನಡೆಸಿ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರರಾದವರು.
1977ರಲ್ಲಿ ಪ್ರಿಯಾಕಾರಿಣಿಯನ್ನು ಮದುವೆಯಾದ ಇವರು ಎಂ.ಕೆ ಸುವೃತ ಕುಮಾರ್ ಮತ್ತು ವಿಪುಲ ತೇಜರೆಂಬ ಮಕ್ಕಳೊಂದಿಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.
ಸರಳ ಸಜ್ಜನರಾದ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ಅವರು ಸಾಧಿಸಿರುವ ಸಾಧನೆಗೆ ಅವರ ಕ್ರಿಯಾಶೀಲತೆಗೆ ಸಂದ ಗೌರವ
ಶ್ರೀಮತಿ ಮಿತ್ರಪ್ರಭ ಹೆಗ್ಡೆ
ಅಧ್ಯಕ್ಷರು
ಅ.ಭಾ ಸಾ.ಪರಿಷತ್ತು. ಕಾರ್ಕಳ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ