ADVERTISEMENT
Saturday, July 12, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕಾನೂನು ತಜ್ಞ ಎಂ.ಕೆ.ವಿಜಯ್ ಕುಮಾರ್ ಅವರಿಗೆ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Shwetha by Shwetha
October 30, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Kannada Rajyotsava udupi
Share on FacebookShare on TwitterShare on WhatsappShare on Telegram

ಕಾನೂನು ತಜ್ಞ ಎಂ.ಕೆ.ವಿಜಯ್ ಕುಮಾರ್ ಅವರಿಗೆ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ    Kannada Rajyotsava udupi

ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯು ಕಾರ್ಕಳದ ಖ್ಯಾತ ವಕೀಲ ಎಂ.ಕೆ.ವಿಜಯ್ ಕುಮಾರ್ ಸೇರಿದಂತೆ 65 ಮಂದಿ ಸಾಧಕರನ್ನು ಅರಸಿ ಬಂದಿವೆ.   Kannada Rajyotsava udupi

Related posts

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

July 12, 2025
ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

July 12, 2025

Kannada Rajyotsava udupi
ಸಾಮಾಜಿಕ ತುಡಿತ, ಕ್ರಿಯಾಶೀಲತೆ, ಪರಿಶ್ರಮಗಳ ಸಾಕಾರ ಮೂರ್ತಿ ಎಂ.‌ ಕೆ. ವಿಜಯ್ ಕುಮಾರ್ ಮೈಸೂರು ಮಹಾರಾಜರಿಂದ ಮಹಾ ಆಸ್ಥಾನ ವಿದ್ವಾನ್ ಬಿರುದು ಪಡೆದ ದಿ. ಸುಬ್ಬಯ್ಯ ಶಾಸ್ತ್ರಿ ದಿ. ಎಂ.ಕೆ. ಲಕ್ಷ್ಮಿ ಮತಿ ಅಮ್ಮನವರ ಆರನೆಯ ಸುಪುತ್ರರು.

ತಾರುಣ್ಯದಲ್ಲೇ ತಮ್ಮ ಪ್ರಖರವಾದ ಮಾತುಗಾರಿಕೆಯಿಂದ ಗುರುತಿಸಲ್ಪಟ್ಟಿದ ಇವರು ತಮ್ಮ ಕನಸಿನ ವಕೀಲ ವೃತ್ತಿಯನ್ನು ಕೈಗೊಂಡರು. ‌ಅವರ ಸಾಹಿತ್ಯಿಕ, ಸಾಂಸ್ಕೃತಿಕ ಪರಿಸರ ಅವರನ್ನು ಜನಪರ ಚಿಂತನೆಯ ಯುವ ನಾಯಕನಾಗಿ ಬೆಳೆಸಿತು.

1967ರಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದ ಇವರು ವೃತ್ತಿರಂಗದಲ್ಲಿ ಯುವ ವಕೀಲರಿಗೆ ಮಾದರಿಯಾಗಿ ಗುರುತಿಸಲ್ಪಟ್ಟವರು.
ವಕೀಲ ವೃತ್ತಿಯನ್ನು ಉದ್ಯೋಗವೆಂದು ಭಾವಿಸದೆ ಸಮಾಜ ಸೇವೆಗೆ‌ ತನಗೆ‌ ಭಗವಂತ ಕಲ್ಪಿಸಿದ ಅವಕಾಶವೆಂದೇ ತಿಳಿದವರು. ನ್ಯಾಯದ ಪರವಾಗಿ, ಅಸಹಾಯಕರು, ಆರ್ಥಿಕವಾಗಿ ನೊಂದವರ ಪರವಾಗಿ ನಿಂತು ಉಚಿತವಾಗಿ ಕಾನೂನಿನ ನೆರವು ನೀಡಿದವರು.

1973ರಲ್ಲಿ ಜನಸಂಘ ಪಕ್ಷದ ಕಾರ್ಯಕರ್ತನಾಗಿ ಗುರುತಿಸಿ ಕೊಂಡ ಇವರು ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಮುನ್ನುಗ್ಗಿದರು. 1978ರಲ್ಲಿ ಜನತಾ ಪಕ್ಷದ ಕಾರ್ಕಳ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಆಯ್ಕೆಗೊಂಡರು.‌ ಜನತಾ ಪಕ್ಷ ಭಾರತೀಯ ಜನತಾ ಪಕ್ಷವಾದಾಗ ಮತ್ತೊಮ್ಮೆ ಕಾರ್ಕಳದ ವಿಧಾನ ಸಭೆಗೆ ಅಭ್ಯರ್ಥಿಯಾಗಿ ಆಯ್ಕೆಯಾದರೂ ಅಲ್ಪ ಅಂತರದಿಂದ ‌ಶ್ರೀ ವೀರಪ್ಪ ಮೊಯಿಲಿ ಯವರ ಎದುರು ಸೋತರೂ ರಾಜ್ಯದಲ್ಲಿ ಅತ್ಯಧಿಕ ಮತ ಪಡೆದ ಮೂರನೆಯ ಅಭ್ಯರ್ಥಿಯಾಗಿದ್ದರು.

ಇವರ ಕೈಕೆಳಗೆ ಅಸಂಖ್ಯಾತ ಕಿರಿಯ ವಕೀಲರು, ತರಬೇತು ಪಡೆದಿದ್ದು, ಅವರ ಶಿಷ್ಯರು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನಿಯುಕ್ತಿ ಹೊಂದಿದ್ದಾರೆ ಮಾತ್ರವಲ್ಲ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿ ಇತ್ತೀಚೆಗೆ ನೇಮಕಗೊಂಡ ಜಸ್ಟೀಸ್ ಅಬ್ದುಲ್ ನಜೀರ್ ವರು ಇವರ ಶಿಷ್ಯರು. ಇವರು ಅವಿಭಜಿತ ದ.ಕ ಜಿಲ್ಲಾ ಬಾರ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ತಮ್ಮ ಕಾರ್ಯ ವೈಖರಿಯಿಂದ ಸರ್ವರ ಅಭಿಮಾನಕ್ಕೆ ಪಾತ್ರರಾದವರು.

Kannada Rajyotsava udupi
ಸಾಹಿತ್ಯ ಪ್ರಿಯರಾದ ಇವರ ಮಾರ್ಗದರ್ಶನ, ನೇತೃತ್ವದಲ್ಲಿ ತಾಲ್ಲೂಕು, ಜಿಲ್ಲಾ, ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು ನಡೆದಿದೆ. ಸಾಹಿತ್ಯ ಸೇವೆಗೆ ತನ್ನನ್ನೇ ಮುಡಿಪಾಗಿಟ್ಟುಕೊಂಡ ಇವರ ಸಾರಥ್ಯ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ವಿಗೆ ಕಾರಣ.‌ ಅನೇಕ ವಿಚಾರಗೋಷ್ಠಿ, ಕಾರ್ಯಗಾರಗಳಲ್ಲಿ ಪ್ರಬಂಧ ಮಂಡನೆ ಮಾಡಿ ಜನ ಮೆಚ್ಚುಗೆ ಗಳಿಸಿದ ಹೆಗ್ಗಳಿಕೆ ಇವರದು. ಪ್ರಕಾಂಡ ಪಂಡಿತರಾದ ಇವರ ನಿರರ್ಗಳ ವಾಗ್ವೈಕರಿ ಸಭಿಕರನ್ನು ಮಂತ್ರ ಮುಗ್ದವಾಗಿಸುವಂತಹದ್ದು. ಸಾಹಿತ್ಯ ಸೇವೆಗೆ ತನ್ನನ್ನೇ ಮುಡಿಪಾಗಿಟ್ಟುಕೊಂಡ ಇವರು ತುಳುನಾಡಿನ ಕಂಬಳ ಕ್ರೀಡೆಯು ಪ್ರೋತ್ಸಾಹಕರು. ಅನೇಕ ಶಿಕ್ಷಣ ಸಂಸ್ಥೆಗಳ ರೂವಾರಿಯಾಗಿ ಆ ಮೂಲಕ ಶಿಕ್ಷಣ ಕ್ರಾಂತಿಗೆ ಕೈಜೋಡಿಸಿದವರು.

ಕಾರ್ಕಳದ ಬಾಹುಬಲಿಯ ಮಸ್ತಕಾಭಿಷೇಕದ ಪ್ರಧಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ನಡೆಸಿ ದೇಶದಾದ್ಯಂತ ಮೆಚ್ಚುಗೆಗೆ ಪಾತ್ರರಾದವರು.
1977ರಲ್ಲಿ ಪ್ರಿಯಾಕಾರಿಣಿಯನ್ನು ಮದುವೆಯಾದ ಇವರು ಎಂ.ಕೆ ಸುವೃತ ಕುಮಾರ್ ಮತ್ತು ವಿಪುಲ ತೇಜರೆಂಬ ಮಕ್ಕಳೊಂದಿಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.
ಸರಳ ಸಜ್ಜನರಾದ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ಅವರು ಸಾಧಿಸಿರುವ ಸಾಧನೆಗೆ ಅವರ ಕ್ರಿಯಾಶೀಲತೆಗೆ ಸಂದ ಗೌರವ

ಶ್ರೀಮತಿ ಮಿತ್ರಪ್ರಭ ಹೆಗ್ಡೆ
ಅಧ್ಯಕ್ಷರು
ಅ.ಭಾ ಸಾ.ಪರಿಷತ್ತು. ಕಾರ್ಕಳ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Tweets by SaakshaTv

 

Tags: citizens of KarnatakaKannada Rajyotsava awardkarnatakaMK Vijay Kumarsecond-highest civilian honourUdupi
ShareTweetSendShare
Join us on:

Related Posts

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

ಕೊಂಕಣ ರೈಲ್ವೆಯಲ್ಲಿ ನೇಮಕಾತಿ 2025

by Shwetha
July 12, 2025
0

KRCL Technicians Recruitment 2025 : ಕೊಂಕಣ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ ಇದರಲ್ಲಿ ಅಗತ್ಯವಿರುವ ಟೆಕ್ನಿಷಿಯನ್ಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ....

ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

ಗುಡ್ ನ್ಯೂಸ್: ರೈತರೇ, ಇನ್ನು ಪಹಣಿ ವರ್ಗಾವಣೆ ಚಿಂತೆ ಬೇಡ! ‘ಪೌತಿ ಖಾತೆ’ ನಿಮ್ಮ ಮನೆ ಬಾಗಿಲಿಗೆ!

by Shwetha
July 12, 2025
0

ಬೆಂಗಳೂರು: ರಾಜ್ಯದ ರೈತ ಸಮುದಾಯಕ್ಕೆ ಸರ್ಕಾರದಿಂದ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಇನ್ನು ಮುಂದೆ ರೈತರ ಪಹಣಿ (RTC) ನೋಂದಣಿ ಪ್ರಕ್ರಿಯೆಯು ಅವರ ವಾರಸುದಾರರ ಹೆಸರಿಗೆ ಸುಲಭವಾಗಿ ಮತ್ತು ನೇರವಾಗಿ...

ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಬೇಕು – ಇಲ್ಲದಿದ್ದರೆ ನಾಟಕ ಮುಂದುವರೆಯುತ್ತದೆ: ಬೊಮ್ಮಾಯಿ

ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟನೆ ನೀಡಬೇಕು – ಇಲ್ಲದಿದ್ದರೆ ನಾಟಕ ಮುಂದುವರೆಯುತ್ತದೆ: ಬೊಮ್ಮಾಯಿ

by Shwetha
July 12, 2025
0

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಕೇಳಿಬರುತ್ತಿರುವ ಚರ್ಚೆಗಳ ನಡುವೆ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಹೈಕಮಾಂಡ್‌ ಅನ್ನು ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯನವರು...

ಪಕ್ಷವೇ ನನ್ನ ಶಕ್ತಿ – ಮಲ್ಲಿಕಾರ್ಜುನ ಖರ್ಗೆ ಅವರ ದೀಕ್ಷೆ ಪಾಲಿಸುತ್ತೇನೆ: ಡಿಕೆ ಶಿವಕುಮಾರ್ ಸ್ಪಷ್ಟನೆ

ಪಕ್ಷವೇ ನನ್ನ ಶಕ್ತಿ – ಮಲ್ಲಿಕಾರ್ಜುನ ಖರ್ಗೆ ಅವರ ದೀಕ್ಷೆ ಪಾಲಿಸುತ್ತೇನೆ: ಡಿಕೆ ಶಿವಕುಮಾರ್ ಸ್ಪಷ್ಟನೆ

by Shwetha
July 12, 2025
0

ರಾಜ್ಯದ ಡಿಸಿಎಂ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಮೇಲೆ ತಾವು ಸಂಪೂರ್ಣವಾಗಿ ನಿಷ್ಠಾವಂತರಾಗಿರುವುದನ್ನು ಪುನರುಚ್ಚರಿಸಿದ್ದಾರೆ. ಪಕ್ಷವಿದ್ದರೆ ತಾನೇ ನಾನು. ಪಕ್ಷವೇ ಇಲ್ಲದಿದ್ದರೆ ನಾನಿಲ್ಲ...

135 ಸೀಟುಗಳನ್ನು ಗೆಲ್ಲಿಸಿ ರಾಜ್ಯದ ಅಧಿಕಾರಕ್ಕೆ ಬಂದರೂ ಸುಸ್ಥಿರ ಆಡಳಿತ ನೀಡಲು ವಿಫಲವಾಗಿರುವ ಕಾಂಗ್ರೆಸ್ – ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕು: ಆರ್. ಅಶೋಕ್ ಕಿಡಿ

135 ಸೀಟುಗಳನ್ನು ಗೆಲ್ಲಿಸಿ ರಾಜ್ಯದ ಅಧಿಕಾರಕ್ಕೆ ಬಂದರೂ ಸುಸ್ಥಿರ ಆಡಳಿತ ನೀಡಲು ವಿಫಲವಾಗಿರುವ ಕಾಂಗ್ರೆಸ್ – ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕು: ಆರ್. ಅಶೋಕ್ ಕಿಡಿ

by Shwetha
July 12, 2025
0

ರಾಜ್ಯದಲ್ಲಿ 135 ಸೀಟುಗಳ ಭರ್ಜರಿ ಗೆಲುವು ಒದಗಿಸಿದರೂ ಕೂಡ ಸುಸ್ಥಿರ ಸರ್ಕಾರ ನೀಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ವಿಧಾನಸಭೆ ವಿರೋಧ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram