ಮತ್ತೆ ಬಿಜೆಪಿಯಲ್ಲಿ ದೆಹಲಿ ದಂಡಯಾತ್ರೆ ಶುರು : ಬೂದಿ ಮುಚ್ಚಿದ ಕೆಂಡದಂತಾದ ಕೇಸರಿ ಪಡೆ
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಆರಂಭವಾಗಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ವಿರೋಧಿ ಪಡೆ ಮತ್ತೆ ದೆಹಲಿ ದಂಡಯಾತ್ರೆ ಶುರು ಮಾಡಿದೆ.
ಯಡಿಯೂರಪ್ಪ ಬಳಿಕ ಮುಂದಿನ ಸಿಎಂ ಅಂತಲೇ ಬಿಂಬಿತವಾಗಿರುವ ಶಾಸಕ ಅರವಿಂದ್ ಬೆಲ್ಲದ್ ಅವರು ಶುಕ್ರವಾರ ತಡರಾತ್ರಿ ಬಿಜೆಪಿ ಬಿಗ್ ಬಾಸ್ ಗಳ ಭೇಟಿಗೆ ತೆರಳಿದಿದ್ದಾರೆ.
ಕಳೆದ ಮೇ 24 ರಂದು ಬೆಲ್ಲದ್ ದೆಹಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ವರಿಷ್ಠರ ಭೇಟಿ ಸಾಧ್ಯವಾಗಿರಲಿಲ್ಲ.ಇದೀಗ ಮತ್ತೆ ದೆಹಲಿಗೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ.
ರಾಜ್ಯದಲ್ಲಿ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಪದೇ ಪದೇ ಮುನ್ನಲೆಗೆ ಬರುತ್ತಲೇ ಇದೆ.
ಈ ಬಗ್ಗೆ ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಅರುಣ್ ಸಿಂಗ್ ಅವರು, ಸಿಎಂ ಬದಲಾವಣೆಯ ಪ್ತಸ್ತಾಪವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಅರುಣ್ ಸಿಂಗ್ ಈ ಹೇಳಿಕೆ ಬೆನ್ನಲ್ಲೆ ಬೆಲ್ಲದ್ ದೆಹಲಿಗೆ ಭೇಟಿ ನೀಡಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ.