ನಾನು ಯಾವುದಕ್ಕೂ ಅಂಜೋ ಮಗ ಅಲ್ಲ : ಯತ್ನಾಳ್
ಬೆಂಗಳೂರು : ನಾನು ಯಾವುದಕ್ಕೂ ಅಂಜೋ ಮಗ ಅಲ್ಲ. ಯಾವಾಗ ಬಾಣ ಬಿಡಬೇಕು, ಯಾವಾಗ ಮೌನವಾಗಿರಬೇಕು ನನಗೆ ಗೊತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೆಸರೇಳದೆ ರೇಣುಕಾಚಾರ್ಯ ವಿರುದ್ಧ ಕಿಡಿಕಾರಿದರು. ಮೊನ್ನೆಯ ಸಭೆಯಲ್ಲಿ ಒಬ್ಬನೇ ಒಬ್ಬ ಶಾಸಕ ಮಾತ್ರ ನನ್ನ ಮೇಲೆ ಗಲಾಟೆ ಮಾಡಿದ್ದು, ಉಳಿದ ಶಾಸಕರು ಎಲ್ಲರೂ ಸುಮ್ಮನಿದ್ದರು.
ಹಾದಿ ಬೀದಿಲಿ ಕೆಲವರು ಹೇಳಿಕೆ ಕೊಡ್ತಿದ್ದಾರಲ್ಲ. ಯಡಿಯೂರಪ್ಪ ಸಭೆಯಲ್ಲಿ ಒಬ್ಬರೇ ಶಾಸಕರು ಗಲಾಟೆ ಮಾಡಿದ್ದು ಅಂತ ಡಿಸಿಎಂ ಗೋವಿಂದ ಕಾರಜೋಳ ಅವರು ಹೇಳಿದ್ದು ಸತ್ಯ ಇದೆ. ದಿಢೀರ್ ಸಚಿವರಾಗಬೇಕು ಅಂತ ಒಬ್ಬರು ಅತೀ ನಿಷ್ಠೆ ತೋರಿಸಿದ್ದಾರೆ.
ನಾನು ಹೊನ್ನಾಳಿಯ ಅಂಜದ ಗಂಡು : ಎಂ.ಪಿ.ರೇಣುಕಾಚಾರ್ಯ
ಡಿಸಿಎಂ ಆಗಬೇಕು ಅಂತ ಕೆಲವರಿಗೆ ಇರಬಹುದು. ಯಡಿಯೂರಪ್ಪ ಅವರಗೆ ನಾನು ಮಾತಾಡಿದಾಗ ಬೇಜಾರಾಯ್ತೋ ಇಲ್ಲೋ ನನಗೆ ಗೊತ್ತಿಲ್ಲ. ಯಾವಾಗ ಬಾಣ ಬಿಡಬೇಕು, ಯಾವಾಗ ಮೌನವಾಗಿರಬೇಕು ನನಗೆ ಗೊತ್ತಿದೆ ಎಂದು ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಉತ್ತರ ಕರ್ನಾಟಕದವನು. ಕ್ಷಮೆಯಾಚಿಸಿದ್ದೇನೆ ಅಂತ ಹೇಳೋನು ನಾನಲ್ಲ. ಮಾಧ್ಯಮದವರು ತಿರುಚಿದ್ದಾರೆ ಅಂತ ಹೇಳೋನು ನಾನಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ನಾನು ಮಾತನಾಡುತ್ತೇನೆ. ಜನಪರ ವಿಚಾರಗಳನ್ನೇ ನಾನು ಮಾತನಾಡಿದ್ದೇನೆ.
ಸರ್ಕಾರ ತಪ್ಪು ಮಾಡಿದಾಗ ನಾನು ಎಚ್ಚರಿಸಿದ್ದೇನೆ. ಅದು ಪಕ್ಷ ವಿರೋಧಿ ಕೆಲಸ ಅಲ್ಲ. ಅಭಿವೃದ್ಧಿ ಪರ ನನ್ನ ಧ್ವನಿ ಯಾರೂ ನಿಲ್ಲಿಸಲು ಆಗುವುದಿಲ್ಲ. ನಾನು ಮಾತನಾಡುವಾಗ ಯಾರೂ ಖಂಡಿಸಿಲ್ಲ.
ಒಬ್ಬರೇ ಒಬ್ಬರು ಗಲಾಟೆ ಮಾಡಿದ್ರು ಬಿಟ್ಟರೆ ಬೇರೆ ಯಾರೂ ನನಗೆ ವಿರೋಧ ಮಾಡಲಿಲ್ಲ. ಅಂದರೆ ಉಳಿದ ಶಾಸಕರಿಗೂ ನಾನು ಹೇಳಿದ್ದು ಸಹಮತ ಇದೆ ಅಂತ ಅರ್ಥ ಅಲ್ಲವೇ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









