ನಾವೆಲ್ಲಾ ಶಾಸಕರು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ, ಹೇಳಿಕೊಳ್ಳೋಕೂ ಆಗಲ್ಲ : ಗೂಳಿಹಟ್ಟಿ ಶೇಖರ್
ಬೆಂಗಳೂರು : ಬಿಜೆಪಿ ಎಲ್ಲವೂ ಸರಿಯಿಲ್ಲ ಎಂದು ಮತ್ತೆ ರುಜುವಾಗಿದೆ. ಸರ್ಕಾರದಲ್ಲಿ ಅಸಮಾಧಾನದ ಹೊಗೆ ಆಗಾಗ ಕಾಣಿಸಿಕೊಳ್ಳುತ್ತಿರುತ್ತಲೇ ಇರುತ್ತದೆ. ಇದೀಗ ಶಾಸಕ ಗೂಳಿಹಟ್ಟಿ ಶೇಖರ್ ” ನಾವೆಲ್ಲಾ ಶಾಸಕರು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ.
ಹೇಳಿಕೊಳ್ಳೋಕೂ ಆಗಲ್ಲ, ಬಿಡೋದಕ್ಕೂ ಆಗಲ್ಲ. ಅಂತಹ ಪರಿಸ್ಥಿತಿ ನಮ್ಮದಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದರು.
ವಿಧಾಸಸೌಧದಲ್ಲಿ ಸುದ್ದಿಗಾರಾರರೊಂದಿಗೆ ಮಾತನಾಡಿದ ಅವರು, ನಾವು ಶಾಸಕರು ಒಂದು ಮಾತನಾಡಿದ್ರೆ ದೊಡ್ಡದಾಗುತ್ತದೆ. ಒಂದು ಮಾತು ಬಿಟ್ಟರೆ ಸಣ್ಣದಾಗುತ್ತದೆ.
ಖಾಸಗಿ ಶಾಲೆಯ ಸಿಬ್ಬಂದಿಗಳಿಗೂ ಪರಿಹಾರ ನೀಡಿ : ಸಿದ್ದಗಂಗಾ ಶ್ರೀ
ನಾವು ಏನೇ ಮಾತನಾಡಿದರೂ ಕಷ್ಟ.ನಾವೆಲ್ಲಾ ಶಾಸಕರು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಹೇಳಿಕೊಳ್ಳೋಕೂ ಆಗಲ್ಲ, ಬಿಡೋದಕ್ಕೂ ಆಗಲ್ಲ. ಅಂತಹ ಪರಿಸ್ಥಿತಿ ನಮ್ಮದಾಗಿದೆ ನಮಗೂ ಅನೇಕ ಸಮಸ್ಯೆಗಳಿವೆ.
ಕ್ಷೇತ್ರಕ್ಕೆ ಹೋದರೆ ಕೆಲಸ ಆಗುತ್ತಿಲ್ಲವೆಂದು ಜನ ಬೈಯುತ್ತಾರೆ. ಇನ್ನು ಮಂತ್ರಿಗಳಿಗೆ ಹೇಳಿಕೊಳ್ಳೋಣವೆಂದರೆ ಅವರೇ ಸಿಗುತ್ತಿಲ್ಲ.
ನಾವು ಮಾತನಾಡಿದರೆ ಬೇರೆ ಬೇರೆ ಬಣ್ಣ ಕಟ್ಟುತ್ತಾರೆ ಎಂದು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಇನ್ನು ಸಿಎಂ ಪುತ್ರ ವಿಜಯೇಂದ್ರ ಸರ್ಕಾರದಲ್ಲಿ ಅಸ್ತಕ್ಷೇಪ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ.
ಅಂತಹ ಸಂದಿಗ್ಧ ಪರಿಸ್ಥಿಯಲ್ಲಿ ನಾವಿದ್ದೇವೆ. ನಾವು ಏನೇ ಮಾತನಾಡಿದರೂ ತಪ್ಪಾಗುತ್ತದೆ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









