ಸೋಂಕಿತರ ಮನೋಲ್ಲಾಸಕ್ಕಾಗಿ ಕುಣಿದ ಶಾಸಕ ಅನ್ನದಾನಿ
ಮಂಡ್ಯ: ಕೋವಿಡ್ ಸೋಂಕಿತರನ್ನು ರಂಚಿಸುವ ಉದ್ದೇಶದಿಂದ ಶಾಸಕ ಕೆ.ಅನ್ನದಾನಿ ಹಾಡಿ, ನೃತ್ಯ ಮಾಡಿದ್ದಾರೆ. ಮಳವಳ್ಳಿ ಪಟ್ಡಣದ ಕೆಎಸ್ ಆರ್ ಟಿಸಿ ತರಬೇತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿ
ಸೋಂಕಿತರಿಗೆ ಮನೋರಂಜನೆ ನೀಡುವುದಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಜಾನಪದ ಗೀತೆ ಹಾಡಿ ನೃತ್ಯಮಾಡಿ ರಂಜಿಸಿದ ಶಾಸಕರ ಜೊತೆ, ಸೋಂಕಿತರು ಕೂಡ ನೃತ್ಯ ಮಾಡಿ ಸಂತೋಷಪಟ್ಟಿದ್ದಾರೆ. ಸ್ವತಃ ಜಾನಪದ ಗಾಯಕರು ಹಾಗೂ ಕಲಾವಿದರಾಗಿರುವ ಶಾಸಕ ಅನ್ನದಾನಿ, ಸೋಂಕಿತರು ಬೇಗ ಗುಣಮುಖರಾಗುವಂತೆ ಹಾರೈಸಿದರು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








