N. Mahesh | ಅರ್ಧ ಅಡಿ ನೀರಲ್ಲಿ ನಡೆಯದ ಶಾಸಕರು ತೆಪ್ಪದಲ್ಲಿ ಬಂದ್ರು
ಚಾಮರಾಜನಗರ : ಅರ್ಧ ಅಡಿ ನೀರಲ್ಲಿ ನಡೆದು ಬರುವ ಬದಲು ತೆಪ್ಪದಲ್ಲಿ ಬಂದ ಶಾಸಕ ಎನ್. ಮಹೇಶ್ ಅಂದ ದರ್ಬಾರ್ ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತಾಲೂಕಿನಲ್ಲಿ ಮಳೆ ಮುಂದುವರೆದಿದ್ದು, ಸುರ್ವಣಾವತಿ ನದಿ ಪ್ರವಾಹಕ್ಕೆ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮ ಜಲಾವೃತಗೊಂಡಿತ್ತು.
ಈ ವೇಳೆ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ನಾನಾ ಅವಾಂತರಗಳು ಸೃಷ್ಟಿಯಾಗಿವೆ.

ಹೀಗಾಗಿ ಪ್ರವಾಹ ವೀಕ್ಷಣೆಗೆಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ತೆರಳಿದ್ದರು.
ಈ ವೇಳೆ ತೆಪ್ಪದಲ್ಲಿ ಕುಳಿತುಕೊಂಡು ಬಂದಿದ್ದಾರೆ.
ಗಮನಿಸಬೇಕಾದ ಅಂಶವೆಂದರೆ ಆ ಸಂದರ್ಭದಲ್ಲಿ ಕೇವಲ ಅರ್ಧ ಅಡಿಯಷ್ಟು ನೀರಿದ್ದರೂ ಶಾಸಕರು ನಡೆದುಕೊಂಡು ಹೋಗುವ ಬದಲು ತೆಪ್ಪದಲ್ಲಿ ಬಂದಿದ್ದಾರೆ. mla-n-mahesh-came-in-raft-at-flood-area-video








