ಕಮಲ ಹಿಡಿಯಲು ಸಿದ್ಧವಿರುವ ಎನ್.ಮಹೇಶ್ : ಹಳೆಯ ವಿಡಿಯೋ ವೈರಲ್
ಚಾಮರಾಜನಗರ : ಶಾಸಕರ ಎನ್ ಮಹೇಶ್ ಅವರು ಶೀಘ್ರದಲ್ಲಿಯೇ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.
ಈ ಮಧ್ಯೆ ಅವರು ಬಿಜೆಪಿ ವಿರುದ್ಧ ಮಾತನಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕಾಂಗ್ರೇಸ್ – ಬಿಜೆಪಿ ಬೆಂಕಿ ಕಡ್ಡಿ ಸೀಮೆಎಣ್ಣೆ ಇದ್ದಂತೆ. ಬಿಜೆಪಿ ಸಂವಿಧಾನ ಬದಲಾವಣೆ ಮಾಡಲು ಹೊರಟಿದೆ.
ಕಪ್ಪು ಹಣ, ನಿರುದ್ಯೋಗ ಸಮಸ್ಯೆ ಬಗೆಹರಿಸಲುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಈ ಹಿಂದೆ ಎನ್ ಮಹೇಶ್ ಹೇಳಿಕೆ ನೀಡಿದ್ದರು.
ಇದೀಗ ಅವರು ಅದೇ ಬಿಜೆಪಿಗೆ ಸೇರಲು ಮುಂದಾಗಿದ್ದು, ಜಿಲ್ಲೆಯಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
ಮೈಸೂರಿನ ಖಾಸಗಿ ವೆಬ್ ಚಾಲನ್ ಗೆ 2018 ರ ಚುನಾವಣೆಯ ವೇಳೆ ಎನ್ ಮಹೇಶ್ ಸಂದರ್ಶನ ನೀಡಿದ್ದರು.
ಆಗ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆದ್ರೆ ಇದೀಗ ಬದಲಾದ ಕಾಲಘಟ್ಟದಲ್ಲಿ ಅದೇ ಬಿಜೆಪಿ ಸೇರಲು ಎನ್ ಮಹೇಶ್ ರೆಡಿಯಾಗಿದ್ದಾರೆ.










