MLA Raju Gowda | ಹೋಂ ಮಿನಿಸ್ಟರ್ ಟೀಚರ್ ರೀತಿ ವರ್ತನೆ ಮಾಡಬೇಡಿ
ಯಾದಗಿರಿ : ಹೋಂ ಮಿನಿಸ್ಟರ್ ಟೀಚರ್ ರೀತಿ ವರ್ತನೆ ಮಾಡಬೇಡಿ, ಹೋಂ ಮಿನಿಸ್ಟರ್ ಖಡಕ್ ಆಗಿ ಕೆಲಸ ಮಾಡಿ ಎಂದು ಶಾಸಕ ರಾಜೂಗೌಡ ಹೇಳಿದ್ದಾರೆ.
ಎಬಿವಿಪಿ, ಬಿಜೆಪಿ ಕಾರ್ಯಕರ್ತರು ಗೃಹ ಸಚಿವರ ಮನೆಗೆ ಮುತ್ತಿಗೆ ವಿಚಾರವಾಗಿ ಯಾದಗಿರಿಯಲ್ಲಿ ಮಾತನಾಡಿದ ರಾಜೂಗೌಡ, ಹೋಂ ಮಿನಿಸ್ಟರ್ ಟೀಚರ್ ತರ ವರ್ತನೆ ಮಾಡಬೇಡಿ, ಹೋಂ ಮಿನಿಸ್ಟರ್ ಖಡಕ್ ಆಗಿ ಕೆಲಸ ಮಾಡಿ. ನಿಮಗೆ ಸರ್ಕಾರ, ಸಿಎಂ ಫ್ರೀ ಬಿಟ್ಟಿದ್ದಾರೆ.
ಉತ್ತಮ ಅಧಿಕಾರಿಗಳನ್ನು ಬಳಸಿಕೊಂಡು ಹಂತಕರನ್ನು ಹೆಡೆಮುರಿ ಕಟ್ಟಿ. ಗೃಹ ಸಚಿವರು ಸಮರ್ಥರಿದ್ದಾರೆ. ಆದ್ರೆ ಸೌಮ್ಯ ಸ್ವಭಾವದವರು ಇದ್ದಾರೆ.
ಸ್ಕೂಲ್ ಮಕ್ಕಳಿಗೆ ಸ್ಕೂಲ್ ಮಾಸ್ಟರ್ ಬುದ್ಧಿ ಹೇಳೋದು ಬೇರೆ, ಸಮಾಜ ವಿರೋಧಿ, ಕೆಟ್ಟವರಿಗೆ, ಕ್ರಿಮಿನಲ್ಸ್ ಗಳಿಗೆ ಇನ್ಸ್ಪೆಕ್ಟರ್ ಭಾಷೆಯಲ್ಲಿಯೇ ಉತ್ತರಿಸಬೇಕು ಎಂದು ಹೇಳಿದರು.
ಸ್ಕೂಲ್ ಮಕ್ಕಳಿಗೆ ರಫ್ ಆಗಿ ಮಾತಾಡಿದ್ರೆ ನಡೆಯಲ್ಲ. ಇಂತಹ ಕ್ರಿಮಿನಲ್ಸ್ ಗಳಿಗೆ ಸ್ಮೂತ್ ಆಗಿ ಮಾತಾಡಿದ್ರೆ ನಡೆಯಲ್ಲ. ಕಾರ್ಯಕರ್ತರು ಸಿಟ್ಟಿಗೆದ್ದಿದ್ದು ನಿಜ, ಅದರಲ್ಲಿ ಎರಡು ಮಾತಿಲ್ಲ.
ಎಲ್ಲರಿಗೂ ಈ ರೀತಿ ಆಗ್ತಿದೆ ಅಂತ ಸಿಟ್ಟಿಗೆದ್ದಿದ್ದಾರೆ. ಅದಕ್ಕಾಗಿ ಸೂಕ್ತ ಕಠಿಣ ಕ್ರಮ ಆಗಬೇಕು.
ಇದರಿಂದ ಕಾರ್ಯಕರ್ತರಿಗೂ ಸರ್ಕಾರ ಕೆಲಸ ಮಾಡ್ತಿದೆ ಅಂತ ಅನಿಸುತ್ತಿದೆ. ಎಷ್ಟು ದಿನ ಕಠಿಣ ಕ್ರಮ ಅಂತ ಕಾರ್ಯಕರ್ತರು ಪ್ರಶ್ನಿಸುತ್ತಾರೆ ಎಂದು ಹೇಳಿದರು.