ನಾವು ಮಠಾಧೀಶರ ವಿರುದ್ದವೂ ಇಲ್ಲ, ಯಾವುದೇ ಉಪ ಪಂಗಡ ಎತ್ತಿ ಕಟ್ಟುತ್ತಿಲ್ಲ : ರೇಣುಕಾಚಾರ್ಯ
ರಾಜಕೀಯವಾಗಿ ಸೋತ ಮನೆಲಿರೋರು ಸ್ವಾಮೀಜಿಗಳ ಜೊತೆ ಸೇರಿ ಹೋರಾಟ ಮಾಡ್ತಿದ್ದಾರೆ. ವಿನಾಕಾರಣ ಯಡಿಯೂರಪ್ಪ ,ವಿಜಯೇಂದ್ರ ಬಗ್ಗೆ ಮಾತಾಡಬಾರದು. ತಪ್ಪು ಹೇಳಿಕೆ ನೀಡಬಾರದು ಎಂದು ಮಾಜಿ ಶಾಸಕ ಕಾಶೆಪ್ಪನವರ ವಿರುದ್ಧ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಇನ್ನೂ ಕಾಂಗ್ರೆಸ್ ತ್ಯಜಿಸಿ ಸಾಮಾನ್ಯ ಕಾರ್ಯಕರ್ತನಾಗಿ ಹೋರಾಟ ಮಾಡಿ. ನಾನು ವಿಜಯೇಂದ್ರ ಸೇರಿದಂತೆ ಯಾರ ವಕ್ತಾರನೂ ಅಲ್ಲ. ಯಡಿಯೂರಪ್ಪ , ವಿಜಯೇಂದ್ರ ಟೀಕೆ ಮಾಡಿದರೆ ಪಕ್ಷಕ್ಕೆ ಟೀಕೆ ಮಾಡಿದ ಹಾಗಲ್ವೇ. ಅದಕ್ಕೆ ನಾನು ಮಾತಾಡಿದ್ದೇನೆ. ಪಾದಯಾತ್ರೆಲಿ ನಾನೂ ಪಾಲ್ಗೊಂಡಿದ್ದೆ. ಕುರುಬ, ವಾಲ್ಮೀಕಿ, ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಿಸೋ ಶಕ್ತಿ ಬಿಜೆಪಿ ಸರ್ಕಾರಕ್ಕೆ ಇದೆ. ಎಲ್ಲಾ ಸಮಸ್ಯೆ ಬಗೆಹರಿಸುತ್ತಾರೆ ಎಂದಿದ್ದಾರೆ.
ದೊಡ್ಡಬಳ್ಳಾಪುರಕ್ಕೆ ತೆರಳಿ ದಲಿತ ಕೇರಿಯ ಸಮಸ್ಯೆಗಳನ್ನ ಆಲಿಸುತ್ತೇನೆ : ಆರ್ ಅಶೋಕ್
ಇದೇ ವೇಳೆ ಚಂಚಮಸಾಲಿ, ಪಾದಯಾತ್ರೆಗೆ ಬೆಂಬಲ ಕೊಟ್ಟಿದ್ದೀನಿ. ಎಲ್ಲಾರಿಗೂ ಮೀಸಲಾತಿ ಕೊಡಿ ಎಂದು ನಾನೂ ಕೇಳ್ತೀನಿ. ನಾವು ಯಾವ ಮಠಾಧೀಶರ ವಿರುದ್ದವೂ ಇಲ್ಲ. ಯಾವುದೇ ಉಪ ಪಂಗಡ ಎತ್ತಿ ಕಟ್ಟುತ್ತಿಲ್ಲ. ಯಾರಿಗೂ ನಮ್ಮ ವಿರೋಧ ಇಲ್ಲ ಎಂದಿದ್ದಾರೆ. ಅಲ್ದೇ ನಿರಾಣಿ ,ಸಿ ಸಿ ಪಾಟೀಲ್ ಸಿಎಂ ಅನುಮತಿ ಪಡೆದೇ ಪಾದಯಾತ್ರೆಲಿ ಭಾಗಿಯಾಗಿದ್ದಾರೆ. ಹಿಂದುತ್ವ, ಶ್ರೀರಾಮನ ಮೇಲೆ ನಂಬಿಕೆ ಇದ್ರೆ ಕುಮಾರಸ್ವಾಮಿ ದೇಣಿಗೆ ನೀಡಲಿ ಎಂದು ರೇಣುಕಾಚಾರ್ಯ ಟಾಂಗ್ ಕೊಟ್ಟಿದ್ದಾರೆ.