ಶ್ರೀರಾಮ ನವಮಿ ಬೈಕ್ ಜಾಥಾದಲ್ಲಿ ಪಾಲ್ಗೊಂಡ ಶಾಸಕಿ ರೂಪಾಲಿ ನಾಯ್ಕ
ಕಾರವಾರ: ಶ್ರೀ ರಾಮ ನವಮಿ ರಾಜ್ಯಾದ್ಯಂತ ಅದ್ಧೂರಿಯಾಗಿ ಆಚರಿಸಿದ್ದು, ಕಾರವಾದಲ್ಲಿ ಹಿಂದೂ ಸಂಘಟನೆಗಳು ಆಯೋಜಿಸಿದ್ದ, ಬೈಕ್ ಜಾಥಾ ಗೆ ಶಾಸಕಿ ರೂಪಾಲಿ ನಾಯ್ಕ ಚಾಲನೆ ನೀಡಿದರು.
ಹಿಂದೂ ಸಂಘಟನೆಗಳು ಆಯೋಜಿಸಿದ್ದ ಜಾಥಾದಲ್ಲಿ ರೂಪಾಲಿ ನಾಯ್ಕ ಸ್ವತಃ ತಾವೇ ಸ್ಕೂಟಿ ಓಡಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡರು. ನಗರದ ಮಾಲಾದೇವಿ ಮೈದಾನದಿಂದ ಜಾಥಾ ಪ್ರಾರಂಭವಾಗಿ, ನಗರದ ಕೋಡಿಬೀರ ದೇವಸ್ಥಾನದ ಮಾರ್ಗವಾಗಿ, ಸುಭಾಷ್ ವೃತ್ತ, ಗ್ರೀನ್ ಸ್ಟ್ರೀಟ್ ಮೂಲಕ ಕೋಡಿಬಾಗ ಕಾಳಿ ರೀವರ್ ಗಾರ್ಡನ್ ಬಳಿ ಶ್ರೀ ರಾಮಚಂದ್ರ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ರ‍್ಯಾಲಿ ಸಂಪನ್ನವಾಯಿತು.
ಜಾಥಾ ಮುಗಿದ ಬಳಿಕ ಮಾತನಾಡಿದ ಶಾಸಕಿ ರೂಪಾಲಿ ಎಸ್.ನಾಯ್ಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಮೋದಿ ಅವರು ರಾಮ ರಾಜ್ಯದ ಕನಸು ನನಸಿಗಾಗಿ ಹಾಗೂ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಪಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಹೆಚ್ಚಿನ ಶಕ್ತಿ, ಆರೋಗ್ಯ ನೀಡಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಎಂದರು.








