AAP ಶಾಸಕ ಸೋಮನಾಥ ಭಾರ್ತಿಗೆ 2 ವರ್ಷ ಜೈಲು ಶಿಕ್ಷೆ ಖಾಯಂ..!
ನವದೆಹಲಿ: 2016ರಲ್ಲಿ ಏಮ್ಸ್ ನ ಭದ್ರತಾ ಸಿಬ್ಬಂದಿ ಮೇಲೆ ಆಪ್ ಶಾಸಕ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ದೆಹಲಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿಯನ್ನು ಅಪರಾಧಿ ಎಂದು ಘೋಷಿಸಿದ್ದ ನ್ಯಾಯಾಲಯ ಇದೀಗ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಕೋರ್ಟ್ ಇತರ ನಾಲ್ವರನ್ನು ಆರೋಪಮುಕ್ತಗೊಳಿಸಿತ್ತು. ನಿನ್ನೆ ಆದೇಶ ಹೊರಡಿಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ, ಆರೋಪಿ ಸೋಮನಾಥ್ ಭಾರ್ತಿ ವಿರುದ್ಧ ಆರೋಪಕ್ಕೆ ಸಂಬಂಧಪಟ್ಟಂತೆ ಐಪಿಸಿ ಸೆಕ್ಷನ್ 149ರಡಿ ಅಪರಾಧಿ ಎಂದು ಸಾಬೀತಾಗಿದೆ. 1984ರ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಯ ಸೆಕ್ಷನ್ 3ರಡಿ ಸೇರಿದಂತೆ ಹಲವು ಕಾಯ್ದೆಗಳಡಿಯಲ್ಲಿ ಸಹ ಸೋಮ ಭಾರ್ತಿ ಅಪರಾಧಿ ಎಂದು ಸಾಬೀತಾಗಿದೆ ಎಂದರು.
ದೇಶದ ಅತ್ಯುತ್ತಮ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ : ಸಮೀಕ್ಷೆ ಏನ್ ಹೇಳತ್ತೆ..!
ಏಮ್ಸ್ ನ ಭದ್ರತಾ ಸಿಬ್ಬಂದಿ ಸಾರ್ವಜನಿಕ ಸೇವಕರ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ಸಾರ್ವಜನಿಕ ಸೇವಕನ ವ್ಯಾಖ್ಯಾನಕ್ಕೆ ಒಳಪಡುತ್ತಾರೆ. ಆದ್ದರಿಂದ, ಏಮ್ಸ್ ಭದ್ರತಾ ಸಿಬ್ಬಂದಿ ಸಾರ್ವಜನಿಕ ಸೇವಕರಲ್ಲ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಇದೇ ಪ್ರಕರಣದಲ್ಲಿ ನ್ಯಾಯಾಲಯವು ಇತರ ಆರೋಪಿಗಳಾದ ಜಗತ್ ಸೈನಿ, ದಲೀಪ್ ಜ್ಹಾ, ಸಂದೀಪ್ ಅಲಿಯಾಸ್ ಸೋನು ಮತ್ತು ರಾಕೇಶ್ ಪಾಂಡೆ ಅವರ ವಿರುದ್ಧ ಆರೋಪವನ್ನು ಮುಕ್ತಗೊಳಿಸಿ ದೋಷಮುಕ್ತಗೊಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel