ಹುಬ್ಬಳ್ಳಿ ಪೊಲೀಸರ ವಿರುದ್ಧ ಎಂಎಲ್‍ಸಿ ಬಸವರಾಜ ಹೋರಟ್ಟಿ ಬೇಸರ (basavaraj horatti hubli)
ಹುಬ್ಬಳ್ಳಿ: ನನ್ನ 40 ವರ್ಷದ ರಾಜಕೀಯದಲ್ಲಿ ಹುಬ್ಬಳ್ಳಿಯ ಪೊಲೀಸ್ ಕಮೀಷನರ್ ಮತ್ತು ಡಿಸಿಪಿಯನ್ನ ನೋಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. (basavaraj horatti hubli)
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾನಾಡಿದ ಹೊರಟ್ಟಿ, ಹುಬ್ಬಳ್ಳಿ- ಧಾರವಾಡ ಪೊಲೀಸ್ ಇಲಾಖೆಯ ಒಳ ಜಗಳದಿಂದ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ನಾನು ನೋಡಿದ ಪ್ರಕಾರ ಪೊಲೀಸ್ ಕಾನ್ಸ್‍ಟೇಬಲ್‍ಗಳು ಜಗಳ ಮಾಡುವುದನ್ನ ನೋಡಿದ್ವಿ. ಆದ್ರೆ ಪೊಲೀಸ್ ಆಫೀಸರ್ಸ್ ಜಗಳ ಇದೇ ಮೊದಲ ಬಾರಿಗೆ ಕೇಳಿದ್ದೇನೆ. (basavaraj horatti hubli) ಇನ್ನೂ ಇಲ್ಲೇ ಮಾಜಿ ಸಿಎಂ, ಹಾಲಿ ಮಂತ್ರಿ, ಗೃಹ ಮಂತ್ರಿ ಇದ್ರೂ ಇದೆಲ್ಲ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಪೊಲೀಸ್ ಇಲಾಖೆಯ ಗೊಂದಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.