ದೇಶದ ರಾಜಧಾನಿಯ ಕೆಲವು ಭಾಗಗಳಲ್ಲಿರಾಜಕೀಯ ಪ್ರೇರಿತ ಹಿಂಸಾಚಾರ ಭುಗಿಲೆದ್ದ 48 ಗಂಟೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಗಲಭೆಯ ಬಗ್ಗೆ ಮೌನ ಮುರಿದಿದ್ದಾರೆ. ದೇಶದ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಕೆಲಸ ಮಾಡುವ ವ್ಯಕ್ತಿಯ ಶವ ಈಶಾನ್ಯ ದೆಹಲಿಯ ಚಾಂದ್‌ಬಾಗ್‌ನ ಚರಂಡಿಯಲ್ಲಿ ಪತ್ತೆಯಾಗಿದೆ. ಇದು ಒಂದು ವ್ಯವಸ್ಥಿತ ಕೊಲೆಯ ಸಂಚು ಎಂದು ಮೇಲ್ನೋಟಕ್ಕೆ ಕಾಣುತಿದ್ದು, ಕನಿಷ್ಠ 27 ಜನರು ಪ್ರಾಣ ಕಳೆದುಕೊಂಡಿದ್ದಾರೆ.


ಟ್ರಂಪ್ ಆಗಮನದಲ್ಲಿ ಬ್ಯುಸಿ ಆಗಿದ್ದ ಮೋದಿ ಬುಧವಾರ ಎರಡು ಟ್ವೀಟ್‌ಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ ಮತ್ತು ಭದ್ರತಾ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡುತ್ತಿವೆ ಎಂದು ಹೇಳಿದರು. ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ಮತ್ತು ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿಲ್ಲ ಸೇರಿದಂತೆ ಹಲವಾರು ವರದಿಗಳು ಮತ್ತು ಟೀಕೆಗಳನ್ನು ಅಲ್ಲಗೆಳೆದರು ಪ್ರಧಾನಿ ಶಾಂತಿ ಮತ್ತು ಸಾಮರಸ್ಯದ ಕಾಪಾಡಲು ಜನರಲ್ಲಿ ಮನವಿ ಮಾಡಿದರು.








