ಮೋದಿ ಅವರು ಇದ್ದ ಉದ್ಯೂಗಗಳನ್ನ ಕಸಿದುಕ್ಕೊಂಡಿದ್ದಾರೆ – ಮಲ್ಲಿಕಾರ್ಜುನ್ ಖರ್ಗೆ
ಹುಬ್ಬಳ್ಳಿ : ಉಪಚುಣಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಬಹುಮತ ಸಿಗುತ್ತೆ, ಒಳ್ಳೆಯ ವಾತಾವರಣವಿದೆ, ಸಿಂದಗಿ ಯಲ್ಲಿ ಎರಡು ದಿನ ಇದ್ದೆ, ಇವತ್ತು ಪ್ರಚಾರಕ್ಕೆ ಕೊನೆಯ ದಿನವಿದೆ, ಎರಡು ಕ್ಷೆತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹುಬ್ಬಳ್ಳಿ ಏರಪೋರ್ಟ ನಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುಣಾವಣೆಯಲ್ಲಿ ವಯಕ್ತಿಕ ವಿಚಾರ ಟೀಕೆಗಳು ಚರ್ಚೆಯ ವಿಚಾರವಾಗಿ, ನಮ್ಮ ಕೆಲಸಗಳು ಚುಣಾವಣೆಯಲ್ಲಿ ಮಾತನಾಡಬೇಕು, ನಮ್ಮ ಸರಕಾರ ಇದ್ದಾಗ ಎನೆನೂ ಕೆಲಸ ಆಗಿದ್ದಾವೂ ಅವೆ ಸಾಕ್ಷಿ, ಯಾರೆ ಇದ್ರು ವಯಕ್ತಿಕ ಟೀಕೆ ಟಿಪ್ಪಣೆ ಆಗಬಾರದು, ಅಭಿವೃದ್ಧಿ , ದೇಶದ ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಟ ಮಾಡಬೇಕಿದೆ. ಇವತ್ತು ನಿರುದ್ಯೋಗಿಗಳ ಸಮಸ್ಯ ಎದ್ದು ಕಾಣ್ತಾ ಇದೆ.
7 ವರ್ಷದಲ್ಲಿ ಮೋದಿ ಅವರು 15 ಕೋಟಿ ಜನರಿಗೆ ಉದ್ಯೂಗ ಕೊಡಬೇಕಿತ್ತು, ಸದ್ಯ ಮೋದಿ ಅವರು ಇದ್ದ ಉದ್ಯೂಗಗಳನ್ನ ಕಸಿದುಕ್ಕೊಂಡಿದ್ದಾರೆ. 32 ಲಕ್ಷ ವೆಕೆನ್ಸಿ ಇವೆ ಅವುಗಳನ್ನ ತುಂಬಿಕ್ಕೊಳ್ಳುತ್ತಿಲ್ಲ.
ರಾಜ್ಯ ಕೇಂದ್ರ ಸರಕಾರದಲ್ಲಿ 62 ಲಕ್ಷ ವೆಕಿನ್ಸಿಗಳಿವೆ. ಅದಾನಿ ಅಂಬಾನಿಗೆ ಎಲ್ಲ ಸರಕಾಸರ ಆಸ್ತಿಗಳನ್ನ ಲೀಜ್ ಕೊಡ್ತಾ ಇದಾರೆ. ಜನರು ಅಭಿವೃದ್ಧಿ ಕಡೆ ವಿಚಾರ ಮಾಡಬೇಕು. ರೈತರ ಮೆಲೆ ದೌರ್ಜನ್ಯ ನಡೆದಿದೆ, ನಾಲ್ಕು ಜನ ರೈತರ ಮೆಲೆ ಹಾಸಿ ಕೊಲೆ ಮಾಡಿದ್ದಾರೆ. ಮೂರು ಕಾನೂನುಗಳನ್ನ ವಾಪಸ್ ಪಡಿತಾ ಇಲ್ಲ. ಯುಪಿಯಲ್ಲಿ ಪರ್ಟಿಲೈಸರ್ ಗೆ ಕ್ಯೂ ನಿಂತಿದ್ದಾರೆ ರೈತರು. ಆದರೆ ಅದನ್ನೆಲ್ಲ ಬಿಟ್ಟು ಕೇವಲ ರಾಜಕೀಯ ಮಾಡುತ್ತಿದೆ. ಕೇಂದ್ರ ಸರಕಾರ ನಾವೂ ಎನೂ ಮಾಡಿದ್ರು ನಡಿಯುತ್ತೆ ಅಂತ ತಿಳಿದುಕ್ಕೊಂಡಿದೆ.
ಸಾಮಾನ್ಯ ಜನರಿಗಂತೂ ತೈಲ ಬೆಲೆ ತುಂಬಾ ಹೆಚ್ಚಾಗಿದೆ. ಆರ್ ಎಸ್ ಎಸ್ ನವರ ಹತ್ರ ಅನೆಕ ಸೆಕ್ಷನ್ ಇದೆ. ಕಾಂಗ್ರೆಸ್ ದು ಇದ್ದರೆ ಆರ್ ಎಸ್ ಎಸ್ ನವರು ಮಾತನಾಡುತ್ತಾರೆ. ಇವತ್ತು ಮೋದಿ ಸರಕಾರ ಸುಳ್ಳು ಹೇಳಿ ಮೋಸ ಮಾಡುತ್ತಿದೆ. ಇದೆ ರೀತಿಯಾಗಿ ಹಿಟ್ಲರ್ ಮಾಡಿದ್ದಾ ..? ಎನ್ನುವ ಮೂಲಕ ಮೋದಿಯನ್ನ ಹಿಟ್ಲರ್ ಹೋಲಿಸಿದ್ದಾರೆ.
ಇದೇ ವೇಳೆ ನಮಗೆ ಬರೋ ಜಿ ಎಸ್ ಟಿ ಪಾಲನ್ನ ಕೇಂದ್ರ ಸರಕಾರ ಕೊಡ್ತಾ ಇಲ್ಲ, ನಮ್ಮ ರಾಜ್ಯದಲ್ಲಿ ಕೇಳೋರಿಲ್ಲ. ರಾಜ್ಯಕ್ಕೆ ಬರೋ ಜಿ ಎಸ್ ಟಿ ಹಣವನ್ನ ಕೆಂದ್ರ ಸರಕಾರ ಕೊಡುತ್ತಿಲ್ಲ ಎಂದಿದ್ದಾರೆ. ಅಲ್ಲದೇ ಉಪಚುಣಾವಣೆಯಲ್ಲಿ ಹಣ ಹಂಚಿಕೆ ವಿಚಾರವಾಗಿ ಮಾತನಾಡಿ ಬಿಜೆಪಿ ಅವರು ಉಪಚುಣಾವಣೆ ಬಂದ್ರೆ ಇಡಿ , ಸಿಬಿಐ, ಐಟಿ ಹೇಗೆ ಉಪಯೋಗ ಮಾಡಬೇಕು ಅನ್ನೋದು ಎಲ್ಲವೂ ಗೊತ್ತಿದೆ. ಅವರು ಉಪಷುಣಾವಣೆಯಲ್ಲಿ ಹಣ ಖರ್ಚು ಮಾಡ್ತಾ ಇದಾರೆ.
ಏರಪೋರ್ಟನ್ನ ಖಾಸಗೀಕರಣದ ಬಗ್ಗೆಯೇ ಮಾತನಾಡಿರೋ ಖರ್ಗೆ ಅವರು ಒಂದೋದಾಗಿ ಎಲ್ಲವನ್ನ ಖಾಸಗೀಕರಣ ಮಾಡಲಿಕ್ಕೆ ಹೊರಟಿದ್ದಾರೆ. 25,000 ಕೋಟಿಯಷ್ಟು ಡ್ಸಗ್ಸ್ ಸಿಕ್ಕಿದೆ,. ಅವರ ಮೆಲೆ ಯಾಕೆ ಕ್ರಮ ವಿಲ್ಲ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಲ್ಲಿದೆ. ಆದರೆ ಮೋದಿ ಅವರು ಸಬ್ ಕಾ ಸತ್ಯಾನಾಶ ಮಾಡಿದ್ದಾರೆ. ಯಾರು ಏನೂ ಹೆಳಲ್ಲ, ರಾಹುಲ್ ಗಾಂದಿ, ಸೋನಿಯಾ ಗಾಂಧಿ ಅವರೆ ನಮ್ಮಲೀಡರ್. ಮುಂದೆ ರಾಹುಲ್ ಗಾಂಧಿ ನಮ್ಮ ಎ ಐ ಸಿ ಸಿ ಅದ್ಯಕ್ಷರಾಗ್ತಾರೆ ಎಂದಿದ್ದಾರೆ.