ಪಾಕ್ ಕ್ರಿಕೆಟ್ ಕಥೆ ಮುಗಿಸುವ ಶಕ್ತಿ ‘ಮೋದಿ’ಗಿದೆ, ಪಾಕ್ನಲ್ಲಿ ಭಾರತ ಕ್ರಿಕೆಟ್ ನಡೆಸುತ್ತಿದೆ – ರಮೀಝ್ ರಾಜಾ
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಝ್ ರಾಜಾ ಭಾರತದ ಬಿಸಿಸಿಐ ತಾಕತ್ತಿನ ಬಗ್ಗೆ ಪಾಕಿಸ್ತಾನದ ಸೆನೆಟ್ ಸ್ಟ್ಯಾಂಡಿಂಗ್ ಸಮಿತಿಯ ಮುಂದೆ ಮಾತನಾಡಿ ಗಮನ ಸೆಳೆದಿದ್ದಾರೆ. ಹೌದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಯಸಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಥೆ ಮುಗಿದುಹೋಗುತ್ತೆ ಎಂದು ಹೇಳಿದ್ದಾರೆ. ಅಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಒಟ್ಟು ಹಣದಲ್ಲಿ ಶೇಕಡ 90 ರಷ್ಟು ಬಿಸಿಸಿಐನಿಂದ ಬರುತ್ತದೆ ಎಂದು ಹೇಳಿ ಗಮನಸೆಳೆದಿದ್ದಾರೆ.
PCB ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಆರ್ಥಿಕ ನೆರವಿನಿಂದ ಬದುಕುತ್ತಿದೆ. ಆದರೆ ICCಯ ಶೇ.90ರಷ್ಟು ಆದಾಯವು ಭಾರತದಿಂದ (BCCI)ನಿಂದಲೇ ಬರುತ್ತದೆ. ಇದು ಭಯ ಹುಟ್ಟಿಸುವ ನೈಜ ಸಂಗತಿ ಎಂದು ಹೇಳಿರುವ ರಮೀಝ್ ಭಾರತದ ಕ್ರಿಕೆಟ್ ಮಂಡಳಿಯ ತಾಕತ್ತಿನ ಬಗ್ಗೆ ತಿಳಿಸಿದ್ದಾರೆ.
ಐಸಿಸಿ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಂತೆ. ಆದ್ರೆ ಶ್ವ ಕ್ರಿಕೆಟನ್ನು ಭಾರತೀಯ ಉದ್ಯಮಿಗಳು ನಿಯಂತ್ರಿಸುತ್ತಾರೆ. ಭವಿಷ್ಯದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಬೇಡಿ ಎಂದು ಭಾರತದ ಪ್ರಧಾನಿ ಮೋದಿ ಅವರೇನಾದ್ರು ಹೇಳಿದರೆ ನಾವು ಏನು ಮಾಡೋಣ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ICCಯ ಮೇಲೆ ಹೆಚ್ಚು ಅವಲಂಬಿಸದೆ PCB ತನ್ನದೇ ಆದ ಆದಾಯವನ್ನು ಗಳಿಸಲು ಹೊಸ ಮಾರ್ಗಗಳನ್ನು ಹುಡುಕಬೇಕು ಎಂದು ಹೇಳಿದ್ದಾರೆ.