ಪ್ರಧಾನಿ ನರೇಂದ್ರ ಮೋದಿ ಸದಾ ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿರುತ್ತಾರೆ. ಇದರ ಮೂಲಕ ತಮ್ಮ ಅಭಿಪ್ರಾಯಗಳನ್ನು ಮೋದಿ ಜನರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಹೀಗಾಗಿಯೇ ಮೋದಿ, ಭಾರತದಲ್ಲಿ ಅತ್ಯಂತ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿದ ನಾಯಕರಾಗಿರುವುದು. ಏತನ್ಮಧ್ಯೆ ಅವರ ಟ್ವಿಟ್ಟರ್ ಫಾಲೋವರ್ಸ್ ಗಳ ಸಂಖ್ಯೆ 60 ಮಿಲಿಯನ್ ದಾಟಿದ್ದು, ಜಾಗತಿಕವಾಗಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ 3ನೇ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಇನ್ನು ಟ್ವಿಟ್ಟರ್ ನಲ್ಲಿ ಪ್ರಧಾನಿಗಳು 2,354 ಜನರನ್ನ ಫಾಲೋ ಮಾಡುತ್ತಿದ್ದು, ಅದರಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಬ್ಬರು.
ಈ ಬಗ್ಗೆ ಸ್ವತಃ ಜಗ್ಗೇಶ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಸೌಭಾಗ್ಯ ನನ್ನ ಈ ಪುಟ್ಟ ಖಾತೆಯನ್ನು 3 ವರ್ಷದಿಂದ ಈ ಮಹನೀಯ ಹಿಂಬಾಲಿಸುತ್ತಿದ್ದಾರೆ, ಇದೇ ನನ್ನ ಬದುಕಿನ ಆಸ್ಕರ್ ಅವಾರ್ಡ್.. ಅವರು ಹಿಂಬಾಲಿಸುವ 2,354 ಜನರಲ್ಲಿ ಈ ಜಡೆಮಾಯಸಂದ್ರದ ಮನುಷ್ಯನೂ ಒಬ್ಬ, ಧನ್ಯೋಸ್ಮಿ’.. ಎಂದು ಟ್ವೀಟ್ ಮಾಡಿದ್ದಾರೆ. 








