‘ಮನ್ ಕೀ ಬಾತ್ ಬಿಡಿ ‘ಪೆಟ್ರೋಲ್ ಕೀ ಬಾತ್’ ಮಾಡಿ’ : ಮೋದಿ ವಿರುದ್ಧ ದೀದಿ ಕಿಡಿ
ಪಶ್ಚಿಮ ಬಂಗಾಳ : ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸದಾ ವಾಗ್ದಾಳಿ ನಡೆಸುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ದೇಶದ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂಪಾಯಿ ದಾಟಿರುವ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮನ್ ಕೀ ಬಾತ್ ನಡೆಸುವ ಬದಲು ಪೆಟ್ರೋಲ್ ಕೀ ಬಾತ್ ಮಾಡಿ ಎಂದು ಹೇಳಿದ್ದಾರೆ.
ಕೋಲ್ಕತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೀದಿ ಮೋದಿ ಸರ್ಕಾರವು ಇಂಧನದ ಮೇಲಿನ ತೆರಿಗೆಯಿಂದ 71 3.71 ಲಕ್ಷ ಕೋಟಿ ರೂಪಾಯಿ ಗಳಿಸಿದೆ. ಈಗ ಆ ಹಣ ಎಲ್ಲಿದೆ, ಆ ಹಣವನ್ನೇ ಕರೊನಾ ಲಸಿಕೆಗೂ ಬಳಸಲಾಗುತ್ತಿದೆ. ಪ್ರಧಾನಿ ಅವರು ಕೇವಲ ‘ಮನ್ ಕೀ ಬಾತ್’ ಮಾತ್ರ ಮಾಡುತ್ತಾರೆ. ಅವರು ಪೆಟ್ರೋಲ್ ಮತ್ತು ಡೀಸೆಲ್ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಆದವರು ದೇಶದ ಆರ್ಥಿಕತೆ ಹಾಗೂ ದೇಶದ ಜನರ ಆರೋಗ್ಯ ಬಗ್ಗೆ ಗಮನ ಹರಿಸಬೇಕು. ಅದರ ಬದಲು ಸಚಿವ ಸಂಪುಟ ಪುನರ್ ರಚನೆ ಮಾಡುವ ಬಗ್ಗೆ ಅಲ್ಲ ಎಂದೂ ಮೋದಿಯನ್ನ ದೀದಿ ಟೀಕಿಸಿದ್ದಾರೆ.