ನವದೆಹಲಿ : ಇಂದು ಗುಡ್ ಫ್ರೈಡೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಯೇಸುವಿನ ಗುಣಗಾನ ಮಾಡಿದ್ದಾರೆ.
“ಯೇಸು ತಮ್ಮ ಜೀವನವನ್ನು ಇತರರ ಸೇವೆಗಾಗಿ ಮೀಸಲಿಟ್ಟಿದ್ದರು. ಅವರ ಧೈರ್ಯ ಮತ್ತು ಸದಾಚಾರ ಹಾಗೂ ನ್ಯಾಯೋಚಿತ ಆಲೋಚನೆ ಇಂದಿಗೂ ಸ್ಮರಣೀಯ”.
ಇಂದು ಗುಡ್ ಫ್ರೈಡೆ, ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನ. ಈ ದಿನ ನಾವು ಕ್ರಿಸ್ತರು ಸಾರಿದ ಸತ್ಯ, ಸೇವೆ ಮತ್ತು ನ್ಯಾಯದ ಸಂದೇಶವನ್ನು ನೆನಪಿಸಿಕೊಳ್ಳಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.








