modi
‘ಡಿಜಿಟಲ್ ಇಂಡಿಯಾ’ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತು..!
ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು 2020ನೇ ವರ್ಷದ ಬೆಂಗಳೂರು ಟೆಕ್ ಶೃಂಗಸಭೆಯನ್ನು ಉದ್ಘಾಟಿಸಿದರು. ಬಳಿಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, 5 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಡಿಜಿಟಲ್ ಇಂಡಿಯಾ’ ಯೋಜನೆಯು ಜನರ ಜೀವನ ಕ್ರಮವಾಗಿ ಮಾರ್ಪಟ್ಟಿದೆ. ‘ಡಿಜಿಟಲ್ ಇಂಡಿಯಾ ಯೋಜನೆಗೆ ಧನ್ಯವಾದಗಳು. ಮಾನವ ಕೇಂದ್ರಿತ ಅಭಿವೃದ್ಧಿಗೆ ನಮ್ಮ ರಾಷ್ಟ್ರವು ಸಾಕ್ಷಿಯಾಗಿದೆ. ತಂತ್ರಜ್ಞಾನವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬಳಸುವುದರಿಂದ ನಮ್ಮ ಜನರ ಜೀವನ ವಿಧಾನದಲ್ಲಿ ಹಲವಾರು ಬದಲಾವಣೆಗಳಾಗಿವೆ ಎಂದು ಹೇಳಿದರು.
ಪತಿಯ 4ನೇ ಮದುವೆಗೆ ಮೂವರು ಪತ್ನಿಯರು ಸಾಥ್, ಆತ ಕೊಟ್ಟ ಕಾರಣ ಏನ್ ಗೊತ್ತಾ..?
ಇನ್ನೂ ಮುಂದುವರೆದು ಮಾತನಾಡಿದ ಪ್ರಧಾನಿಗಳು ಡಿಜಿಟಲ್ ಮತ್ತು ತಂತ್ರಜ್ಞಾನ ಮಾರುಕಟ್ಟೆಯನ್ನು ಬೆಳೆಸುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ತಂತ್ರಜ್ಞಾನವನ್ನು ಎಲ್ಲಾ ಯೋಜನೆಗಳ ಪ್ರಮುಖ ಭಾಗವನ್ನಾಗಿ ಮಾಡಿದೆ. ‘ಟೆಕ್ನಾಲಜಿ ಫಸ್ಟ್’ ಎನ್ನುವುದು ನಮ್ಮ ಆಡಳಿತದ ಮಾದರಿಯಾಗಿದೆ . ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮುಂದೆ ಸಾಗಿರುವ ಭಾರತವು ಜಾಗತಿಕವಾಗಿ ವಿಶಿಷ್ಠ ಸ್ಥಾನ ಹೊಂದಿದೆ. ನಾವು ಅತ್ಯುತ್ತಮ ಪ್ರತಿಭೆಗಳು ಮತ್ತು ದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದೇವೆ. ನಾವು ಹೊಂದಿರುವ ಸ್ಥಳೀಯ ತಂತ್ರಜ್ಞಾನ ಜಾಗತಿಕ ಮಟ್ಟವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಭಾರತದಲ್ಲಿ ವಿನ್ಯಾಸಗೊಳಿಸಲಾಗುವ ತಂತ್ರಜ್ಞಾನವನ್ನು ಜಗತ್ತಿಗೆ ತಲುಪಿಸಬೇಕಾದ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.
modi
ದಿಲ್ಲಿಯಿಂದ ಬರಿಗೈಲಿ ಬಿಎಸ್ವೈ; `ರಾಜಾಹುಲಿ’ ಬದಲಾವಣೆ ಮುನ್ಸೂಚನೆ ಎಂದ ಕೆ.ಎನ್ ರಾಜಣ್ಣ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel