‘ಶಸ್ತ್ರಾಸ್ತ್ರದಿಂದ ಬಾಹ್ಯಾಕಾಶ ಕ್ಷೇತ್ರದ ಸ್ಪರ್ಧೆಯವರೆಗೆ’ ಬೆಳವಣಿಗೆ ಕಂಡಿದ್ದೇವೆ : ನಮೋ..!
ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ 6 ನೇ ‘ಇಂಡೋ-ಜಪಾನ್ ಸಂವಾದ್’ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ಜಾಗತಿಕ ಮಟ್ಟದ ಬೆಳವಣಿಗೆ ಕುರಿತು ಕೆಲವೇ ಮಂದಿ ನಡುವೆ ಚರ್ಚೆ ನಡೆಯುವ ಬದಲು ದೊಡ್ಡ ವೇದಿಕೆಯ ಮೇಲೆ, ವಿಶಾಲವಾದ ಕಾರ್ಯಸೂಚಿಯಲ್ಲಿ ಚರ್ಚೆಯಾಗಬೇಕು. ‘ಬೆಳವಣಿಗೆಯ ಮಾದರಿಗಳು ಮನುಷ್ಯ ಕೇಂದ್ರಿತವಾಗಿರಬೇಕು’ ಎಂದರು.
ಸೋಲು ಒಪ್ಪೋ ಮಾತೇ ಇಲ್ಲ : ಚುನಾವಣಾ ಫಲಿತಾಂಶದ ವಿರುದ್ಧ ಹೋರಾಟ ಮುಂದುವರೆಸಿದ ಟ್ರಂಪ್..!
ಇದೇ ವೇಳೆ ಸಾಮ್ರಾಜ್ಯಶಾಹಿಯಿಂದ ಹಿಡಿದು ವಿಶ್ವ ಯುದ್ಧಗಳವರೆಗೆ, ಶಸ್ತ್ರಾಸ್ತ್ರದಿಂದ ಬಾಹ್ಯಾಕಾಶ ಕ್ಷೇತ್ರದ ಸ್ಪರ್ಧೆಯವರೆಗೆ ಎಲ್ಲ ಹಂತಗಳಲ್ಲೂ ಮಾತುಕತೆಗಳ ಮೂಲಕ ಬೆಳವಣಿಗೆ ಕಂಡಿದ್ದೇವೆ. ಈ ಎಲ್ಲ ಮಾತುಕತೆಗಳು ಒಬ್ಬರು ಮತ್ತೊಬ್ಬರನ್ನು ಹಿಂದಕ್ಕೆ ಎಳೆಯುವ ಗುರಿ ಹೊಂದಿದ್ದವು. ಆದರೆ, ಇನ್ನು ಮುಂದೆ ನಾವೆಲ್ಲ ಒಟ್ಟಾಗಿ ಸಹಯೋಗದಿಂದ ಬೆಳವಣಿಗೆಯತ್ತ ಹೆಜ್ಜೆ ಹಾಕೋಣ ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿದ ಪ್ರಧಾನಿಗಳು ದೇಶಗಳ ಪ್ರಮುಖ ನೀತಿಯಲ್ಲಿ ಮಾನವೀಯತೆ ಒಳಗೊಂಡಿರಬೇಕು ಎಂದು ಕರೆ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel