ಉಜ್ವಲ ಯೋಜನೆ 2.0 – ಉಚಿತ LPG ಗ್ಯಾಸ್ ಸಂಪರ್ಕಕ – ಚಾಲನೆ ನೀಡಿದ ಮೋದಿ
ಉತ್ತರ ಪ್ರದೇಶದ ಮಹೋಬಾದಲ್ಲಿ ಮಂಗಳವಾರ ( ಆಗಸ್ಟ್ 10) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಜ್ವಲ 2.0 (ಪ್ರಧಾನ ಮಂತ್ರಿ ಉಜ್ವಲ ಯೋಜನೆ – PMUY) ಗೆ ಚಾಲನೆ ನೀಡಿದರು. ಬಳಿಕ ಪ್ರಧಾನಮಂತ್ರಿಯವರು ಯೋಜನೆಯ ಫಲಾನುಭವಿಗಳ ಜೊತೆಗೆ ಸಂವಾದ ನಡೆಸಿದರು. ಈ ವೇಳೆ ಯುಎನ್ ಎಸ್ ಸಿಯಲ್ಲಿ ಹಲವು ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಚರ್ಚಿಸಿದರು. ಮನೆ-ಮನೆಗೆ ಎಲ್ಪಿಜಿ ಗ್ಯಾಸ್ ಸಂಪರ್ಕಗಳನ್ನು ಒದಗಿಸುವ ಅಭಿಯಾನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಈಗ ಈ ಯೋಜನೆಯ ಭಾಗ -2 ಅನ್ನು ಪ್ರಾರಂಭಿಸಿದ್ದಾರೆ.
ಸರ್ಕಾರಿ ಸಭೆ-ಸಮಾರಂಭಗಳಿಗೆ ಹೊಸ ರೂಲ್ಸ್ – ಸಿಎಂ ಬೊಮ್ಮಾಯಿ ಆದೇಶ
ನಾವು ಈ ವರ್ಷ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಿದ್ದೇವೆ.. ಕಳೆದ 7 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ ಎಂದು ಭಾವಿಸಿದ್ದೇವೆ ಎಂದು ಮೋದಿ ಅವರು ಅಭಿಪ್ರಾಯ ಪಟ್ಟಿದ್ದಾರೆ.. ರಸ್ತೆ, ವಿದ್ಯುತ್, ಆಸ್ಪತ್ರೆ, ಅಡುಗೆ ಅನಿಲ, ಶಾಲೆ, ನೀರು, ಮನೆ ಮುಂತಾದ ಹಲವು ಮೂಲಭೂತ ಅಗತ್ಯಗಳಿಗಾಗಿ ದೇಶದ ಜನರು ದಶಕಗಳ ಕಾಲ ಸಮಸ್ಯೆ ಅನುಭವಿಸಿದ್ದರು.. ಮಹಿಳೆಯರು ಇದರಿಂದ ಹೆಚ್ಚು ತೊಂದರೆ ಅನುಭವಿಸಿದರು. ಆತ್ಮ ವಿಶ್ವಾಸವಿಲ್ಲದೆ ದೇಶವು ಹೇಗೆ ಸ್ವಾವಲಂಬನೆಯಾಗುತ್ತದೆ. ಈಗ ಪರಿಸ್ಥಿತಿ ಸುಧಾರಣೆಯಾಗಿದೆ ಎಂದರು. ಔಪಚಾರಿಕ ಚಾಲನೆ ನೀಡಿದ ನಂತರ ಪ್ರಧಾನ ಮಂತ್ರಿಗಳು ವಾಸ್ತವಿಕವಾಗಿ 10 ಮಹಿಳೆಯರಿಗೆ ಉಚಿತ ಗ್ಯಾಸ್ ಗಳನ್ನ ವಿತರಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿ ಅವರ ಪರವಾಗಿ ದಾಖಲೆಗಳನ್ನ ವಿತರಣೆ ಮಾಡಿದರು..








