ಮಸೀದಿ ಕಟ್ಟಲು ಮುಂದಾದವರು ನೀರಿನಲ್ಲಿ ಮುಳುಗಿ ಸಾಯಿರಿ
ಬೀದರ್: ಸಿಯಾಸತ್ ಪ್ರಕಾರ ಅತಿಯಾದ ಭಕ್ತಿ ವಿನಾಶಕ್ಕೆ ಹಾದಿ ಎಂದಿದೆ. ಅದೇ ರೀತಿ, ಈಗ ಬಿಜೆಪಿಯಲ್ಲಿ ಮೋದಿ ಭಕ್ತಿ ಹೆಚ್ಚಾಗಿದೆ. ಇದು ಬಿಜೆಪಿಯ ನಾಶಕ್ಕೆ ಕಾರಣವಾಗಲೂಬಹುದು ಎಂದು ಎಐಎಂಐಎ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಬೀದರ್ ನಲ್ಲಿ ನಡೆದ ಶೋಷಿತರ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಓವೈಸಿ, ನಮ್ಮನ್ನು(ಮುಸ್ಲಿಮರನ್ನು) ಹೆದರಿಸುವ ಕಾಲ ದೂರವೇ ಆಯ್ತು. ಈಗ ನಾವು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಬಾಬ್ರಿ ಮಸೀದಿ ಧ್ವಂಸ ಮಾಡಿದ ಜಾಗಕ್ಕೆ ಪರ್ಯಾಯವಾಗು ಉತ್ತರ ಪ್ರದೇಶ ಸರ್ಕಾರ 5 ಎಕರೆ ಭೂಮಿ ಕೊಟ್ಟಿದೆ. 5 ಎಕರೆ ಜಮೀನು ಪಡೆದು ಮಸೀದಿ ಕಟ್ಟಿ ನಮಾಜ್ ಮಾಡುವುದು ಹರಾಮ್ ಮಾಡಿದಂತೆ. ಅಲ್ಲಿ ಮಸೀದಿ ಕಟ್ಟಲು ಮುಂದಾದವರು ನೀರಿನಲ್ಲಿ ಮುಳುಗಿ ಸಾಯಿರಿ ಎಂದು ತಮ್ಮದೇ ಸಮುದಾಯದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೈ ಹಿಂದ್ ಘೋಷಣೆ ಸಿಕ್ಕಿದ್ದು ಅಬೇದ್ ಹಸನ್‍ನಿಂದ..
ನಮಗೆ ಜೈ ಹಿಂದ್ ಘೋಷಣೆ ಸಿಕ್ಕಿದ್ದು ಅಬೇದ್ ಹಸನ್ ಎಂಬಾತನಿಂದ. ನೇತಾಜಿ ಸುಭಾಷಚಂದ್ರ ಭೋಸ್ ಜರ್ಮನಿಗೆ ಹೋದಾಗ ಅವರ ಭಾಷಾಂತರಗಾರ ಅಬೆದ್ ಹಸನ್‍ನಿಂದ ಜೈಹಿಂದ್ ಘೋಷಣೆ ಸಿಕ್ಕಿದೆ ಎಂದು ಓವೈಸಿ ತಿಳಿಸಿದ್ದಾರೆ.
ದಲಿತರೊಂದಿಗೆ ನಾವು ಘರ್ಷಣೆ ಮಾಡುವುದು ಬೇಡ, ಸ್ಪರ್ಧೆ ಬೇಡ. ದಲಿತರೊಂದಿಗೆ ನಾವು ಸಾಮರಸ್ಯದಿಂದ ಇರೋಣ. ಈ ದೇಶದ ಮುಸಲ್ಮಾನರು ದಲಿತರ ಸಮಸ್ಯೆ ಬಗ್ಗೆ ಅರಿಯಬೇಕು. ಅಹಿಂದ ಮಧ್ಯೆ ಗೋಡೆಗಳು ಎದ್ದರೇ ನ್ಯಾಯ ಮುಸ್ಲಿಂ, ದಲಿತ, ಹಿಂದುಳಿದ ವರ್ಗಕ್ಕೆ ಸಿಗುವುದಿಲ್ಲ. ಅದನ್ನು ಮೇಲ್ವರ್ಗದವರು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಓವೈಸಿ ಕಿವಿ ಮಾತು ಹೇಳಿದ್ದಾರೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ದಲಿತ ವಿರೋಧಿ ನೀತಿ ಬಂದಾಗ ಯಾವುದೇ ದಲಿತ ಸಂದರು ಕೂಡ ಧ್ವನಿ ಎತ್ತುವುದಿಲ್ಲ. ಚಮಚಾಗಿರಿ ಮಾಡುವವರೆಗೆ ನಮಗೆ ನ್ಯಾಯ ದುರ್ಲಭವಾಗುತ್ತದೆ. `ನಾನು ಹೋದಲ್ಲಿ ಬಿಜೆಪಿಗೆ ಲಾಭ’ ಅಂತ ಜನ ನನಗೆ ಹೇಳುತ್ತಾರೆ. ಆದರೆ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಮೋಸದಿಂದ ಸೋಲಿಸಿತ್ತು. ಗೋಡ್ಸೆ ನಂಬುವವರು ಶಕ್ತಿ ಕಮಾಯಿಸಲು ದಂಗೆಗೂ ಹಿಂಜರಿಯುವುದಿಲ್ಲ. ಹೀಗಾಗಿ ದಲಿತರು ಹಾಗೂ ಮುಸ್ಲಿಂ ಸೇರಿದಂತೆ ಅಹಿಂದ ಸಮುದಾಯ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








