ಟೀಂ ಇಂಡಿಯಾ ವಿರುದ್ಧ ಗೆಲುವು ನಮ್ಮದೇ : ಹಫೀಜ್
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್-2022ರ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಟೀಂ ಇಂಡಿಯಾ ಅಕ್ಟೋಬರ್ 23 ರಂದು ಮೆಲ್ಬೋರ್ನ್ನಲ್ಲಿ ತನ್ನ ಮೊದಲ ಪಂದ್ಯದಲ್ಲಿ ದಾಯಾದಿ ದೇಶ ಪಾಕಿಸ್ತಾನವನ್ನು ಎದುರಿಸಲಿದೆ.
ಇದರೊಂದಿಗೆ ಮತ್ತೊಮ್ಮೆ ಈ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಇನ್ನೂ ಒಂಬತ್ತು ತಿಂಗಳು ಬಾಕಿ ಇದ್ದರೂ ಈ ಪಂದ್ಯದ ಬಗ್ಗೆ ಹಲವು ಊಹಾಪೋಹಗಳು ಎದ್ದಿವೆ.
ಅದರ ಮುಂದುವರೆದ ಭಾಗವಾಗಿ ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಕೆಲವು ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
“ಪ್ರಸ್ತುತ, ಪಾಕಿಸ್ತಾನ ತಂಡವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ಬಾರಿಯೂ ನಾವು ಖಂಡಿತವಾಗಿಯೂ ಭಾರತದ ವಿರುದ್ಧ ಗೆಲ್ಲುತ್ತೇವೆ. ವಿರಾಟ್ ಮತ್ತು ರೋಹಿತ್ ಟೀಮ್ ಇಂಡಿಯಾಕ್ಕೆ ಬಹಳ ಮುಖ್ಯವಾದ ಆಟಗಾರರು ಎಂದು ನಾನು ಭಾವಿಸುತ್ತೇನೆ.
ಆ ಇಬ್ಬರನ್ನು ಕಟ್ಟಿ ಹಾಕಿದ್ರೆ ನಮ್ಮ ಗೆಲುವು ಸುಲಭವಾಗುತ್ತಿದೆ. ಈ ಇಬ್ಬರು ಆಟಗಾರರನ್ನು ನಾವು ಕಟ್ಟಿಹಾಕಿದ್ರೆ ಇನ್ನುಳಿದ ಆಟಗಾರರು ಒತ್ತಡಕ್ಕೆ ಸಿಲುಕುತ್ತಾರೆ.
ಇನ್ನ ವಿಶ್ವಕಪ್ ಗಳಂತ ಟೂರ್ನಿಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದರೇ ಅದರಲ್ಲಿ ನಾನು ಭಾಗಿಯಾಗಿರಬೇಕು ಎಂದು ಬಯಸುತ್ತೇನೆ. 2021ರ ಟಿ20 ವಿಶ್ವಕಪ್ನಲ್ಲಿ ನನ್ನ ಆಸೆ ಈಡೇರಿದೆ ಎಂದು ಮೊಹಮ್ಮದ್ ಹಫೀಜ್ ಹೇಳಿದ್ದಾರೆ.
2021ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ 10 ವಿಕೆಟ್ಗಳಿಂದ ಗೆಲುವು ಸಾಧಿಸಿತ್ತು. ಆ ಮೂಲಕ ಐಸಿಸಿ ಟೂರ್ನಿಯಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಸೋತಂತಾಗಿದೆ.









