Mohammad-hafeez | ರೋಹಿತ್ ಶರ್ಮಾ ಭಯಪಡುತ್ತಿದ್ದಾರೆ
ಏಷ್ಯಾಕಪ್-2022ರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿರಾಸೆ ಮೂಡಿಸಿದ್ದಾರೆ. ನಾಯಕನಾಗಿ ರೋಹಿತ್ ಯಶಸ್ವಿಯಾಗುತ್ತಿದ್ದರೂ ವೈಯಕ್ತಿಕ ಪ್ರದರ್ಶನದಲ್ಲಿ ವಿಫಲರಾಗುತ್ತಿದ್ದಾರೆ.
ಇದುವರೆಗೆ ಈ ಮೆಗಾ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 33 ರನ್ ಗಳಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ 12 ರನ್ ಗಳಿಸಿದ್ದ ರೋಹಿತ್ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಕೇವಲ 21 ರನ್ ಗಳಿಸಿದ್ದರು.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಹಫೀಜ್ ಮಾತನಾಡುತ್ತಾ, ಹಾಂಗ್ ಕಾಂಗ್ ಮೇಲೆ ಭಾರತ 40 ರನ್ ಗಳ ಗೆಲುವು ದಾಖಲಿಸಿದೆ.

ಆದರೂ ರೋಹಿತ್ ಶರ್ಮಾ ಮುಖದಲ್ಲಿ ಮ್ಯಾಚ್ ಗೆದ್ದ ಆನಂದ ಕಾಣಿಸಲಿಲ್ಲ. ರೋಹಿತ್ ಶರ್ಮಾ ಪ್ರಸ್ತುತ ತೀವ್ರ ಒತ್ತಡದಲ್ಲಿದ್ದಾರೆ. ಕ್ಯಾಪ್ಟನ್ಸಿ ಆತನಿಗೆ ಭಾರವಾಗಿದೆ.
ಆತ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆ ಬಂದಿದ್ದಾಗ ರೋಹಿತ್ ಭಯಪಡುತ್ತಿದ್ದಂತೆ, ಅಯೋಮಯವಾಗಿರುವಂತೆ ಕಾಣಿಸಿಕೊಂಡರು ಎಂದಿದ್ದಾರೆ.
ಈ ಹಿಂದೆ ರೋಹಿತ್ ಶರ್ಮಾ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಅಂತಹ ಹಿಟ್ ಮ್ಯಾನ್ ಅನ್ನು ನಾನು ನೋಡುತ್ತಿಲ್ಲ. ಆತ ದಿನದಿಂದ ದಿನಕ್ಕೆ ಫಾರ್ಮ್ ಕಳೆದುಕೊಳ್ಳುತ್ತಿದ್ದಾರೆ.
ಅದೇ ವಿಧವಾಗಿ ಐಪಿಎಲ್ ನಲ್ಲಿ ದಾರುಣವಾಗಿ ವಿಫಲವಾದ್ರು. ನನಗೆ ಅನಿಸಿದ ಪ್ರಕಾರ ರೋಹಿತ್ ಶರ್ಮಾ ಇದೇ ರೀತಿ ಮುಂದುವರೆದರೇ ಹೆಚ್ಚು ದಿನ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿರುವುದಿಲ್ಲ ಎಂದು ಹಫೀಜ್ ಹೇಳಿದ್ದಾರೆ.








