Politics : ಈಶರಪ್ಪ ವಿರುದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಾಪಡ್ ದೂರು
ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ , ಈಶರಪ್ಪ ವಿರುದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಾಪಡ್ ದೂರು ಸಲ್ಲಿಸಿದ್ದಾರೆ.. ಹೈ ಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ ಮಹಮ್ಮದ್ ನಲಪಾಡ್ ಗೆ ಯುವ ಕಾಂಗ್ರೇಸ್ ಕಾರ್ಯಕರ್ತರ ಸಾಥ್ ನೀಡಿದ್ದರು..
ಬಳಿಕ ಮಾತನಾಡಿದ ನಲಪಾಡ್ ರಾಷ್ಟ್ರಧ್ವಜ ವನ್ನು ತೆಗೆದು ಕೇಸರಿ ಧ್ವಜವನ್ನು ಹಾಕ್ತಿವಿ ಅಂತಾ ಈಶ್ವರಪ್ಪ ಹೇಳಿದ್ದಾರೆ.. ಅದು ಇಂತಹ ಸಮಯದಲ್ಲಿ ಈಶ್ವರಪ್ಪನ ಹೇಳಿಕೆ ಕಾನೂನು ಬಾಹಿರ.. ರಾಷ್ಟ್ರಧ್ವಜ ವನ್ನು ತೆಗೋಕೆ ಈಶ್ವರಪ್ಪನಿಗೆ ಅವಕಾಶ ಕೊಟ್ಟವರು ಯಾರು..? ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ಮಾತಾಡಿದ್ದಾರೆ..
ಅವರಿಗೆ ವಯಸ್ಸಾಗಿದೆ, ಹೇಗೆ ಮಾತಾಡಬೇಕು ಅಂತಾ ಗೊತ್ತಾಗಲ್ವ.. ಈ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಆಗಿಲ್ಲ ಅಂದ್ರೆ ಕೋರ್ಟ್ ಗೆ ಹೊಗ್ತಿವಿ.. ನಾಳೆಯಿಂದ ಕಾಂಗ್ರೆಸ್ ಹೋರಾಟ ಮುಂದುವರೆಯುತ್ತೆ.. ಬಿಜೆಪಿ ಪಕ್ಷ ಈಶ್ವರಪ್ಪನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸೋ ತನಕ ನಮ್ಮ ಹೋರಾಟ ನಿಲ್ಲಲ್ಲ ಎಂದಿದ್ದಾರೆ..